ಶ್ರೀಮದ್ವಿಷ್ಣ್ವಾಜ್ಞದಿಂದ ಜನಿಸಿ ಪವನನು ಕೇಸರೀ ಕ್ಷೇತ್ರದಲ್ಲಿ
ಕಂಜಾಕ್ಷಿ ಸೀತೆಗಾಗಿ ಲವಣಜಲಧಿಯಂ ಲಂಘಿಸಿ ಲಂಕೆಯಲ್ಲಿ |
ಇದ್ದಂಥಾ ರಾವಣನ್ನು ರಘುಪನ ಕರದಿ ನಿಂಗಿಸಿ ಭೂಮಿಯಿಂದ
ಕೂಡಿದ್ದಾ ರಾಘವನ್ನು ಭಜಿಸಿ ಮೆರೆದಿ ಕಿಂಪುರುಷಾ ಖಂಡದಲ್ಲಿ ||೧||
ಆ ವಾಯು ಭೀಮನಾಗಿ ಸುರವರ ಬಲದಿಂ ಕೋಬ್ಬಿದಾಮಾಗದನನ್ನು
ಕಿರ್ಮೀರಂ ಕೀಚಕನ್ನು ಬಕಮುಖಖಲರಂ ದುಷ್ಟದುರ್ಯೋಧನನ್ನು |
ಕೂಂದು ರಾಜಾಶ್ವಮೇಧ ಪ್ರಮುಖಮಖಗಳಂ ಮಾಡಿ ಕೃಷ್ಣಾರ್ಪಣೆಂದು
ರಾಜಾಧಿರಾಜನಾಗಿ ಸುಜನರಪತಿಯು ಮೆರದನು ಸಾಧು ಬಂಧು ||೨||
ಪ್ರಾಗ್ ಜನ್ಮದ್ವೇಷದಿಂದ ಕಲಿಯಲಿ ಮಣಿಮಾನ್ ಸಂಕರಾಚಾರ್ಯನಾಗಿ
ಬ್ರಹ್ಮಾಹಂ ನಿರ್ಗುಣೋಹಂ ವಿತಥ ವಚನದಿಂ ಎಲ್ಲರಂ ಕೆಡಿಸಲಾಗಿ |
ಅಜ್ಞಾನಾಖ್ಯನದಿಂದ ಸುಜನರ ಮತಿಯು ಮ್ಲಾನವಂ ಪೊಂದಿರಲ್ಲು
ಶ್ರೀಶಜ್ಞಾ ಶಿರದಿ ವಹಿಸಿ ಕುರುಕುಲ ಪತಿಯೂ ಆದನೂ ಮಧ್ವಸೂರ್ಯಾ ||೩||
ಸರ್ವಜ್ಞ ಶ್ರೀಶನೇವೇ ವಿಧಿಭವಮುಖರು ಶ್ರೀಹರಿ ದಾಸರೇನೇ
ಸತ್ಯೇವೇ ಈಜಗತ್ತು ಜನವು ತ್ರಿವಿಧವು ನಿತ್ಯ ಪಂಚಪ್ರಭೇದ |
ಈಶಾಧೀನೇವೇ ಸರ್ವಶ್ರುತಿಗಿದನುಗುಣಾ ಅಂದದೇವೇ ಪ್ರಮಾಣಾ
ಹೀಗೆಂದು ಮಧ್ವಸೂರ್ಯ ತಿಳಿಸಿ ಸುಜನಕೆ ಅದನು ದಿವ್ಯಮೋದಾ ||೪||
ಕೇಳೆಂದು ಮಾಯಿವಾದೀ ಸಕಲಸುರವನು ಮಂದಿಗಳ್ಯಜ್ಞನಲ್ಲಾ
ಜಿಜ್ಞಾಸ್ಯ ಬ್ರಹ್ಮನಾರಾಯಣ ಸಕಲಜಗತ್ಪರಿಮಿತಿಯನ್ನು ಬಲ್ಲ |
ನೀನರಿಯೋ ನಿನ್ನ ನಾರಿ ಹಗಲು ಇರಳಲಿ ಜಾರವಾಮಾಡುವೋದು
ಬ್ರಹ್ಮಾಹಂ ನಿರ್ಗುಣೆಂದೋ ವಿತಥ ವಚನವು ಹ್ಯಾಂಗ ನೀಆಡವೋದು ||೫||
ಮಾಯಾವಾದಿಗೆ ಮಾನಹೀನಜನಕೆ ಶುದ್ಧಿಲ್ಲದಾನಾಯಿಗೆ
ಮಾಯಿ ಸಂಕರಗೆ ಸಮೀರನಗದಾ ಪೆಟ್ಟಿಂದಲೇ ಮುಕ್ತಿಯು |
ನಿತ್ಯಂಧತಮ ಅಹುದು ಎಂದು ತಿಳಿದು ಅಜ್ಞಾನವಂ ವರ್ಜಿಸಿ
ಶ್ರೀಮುದ್ರಾಸಹ ಗೋಪಿಚಂದನವನ್ನು ದೇಹಂಗಳಲ್ಯರ್ಚಿಸಿ ||೬||
||ಇತಿ ಶ್ರೀವಾದಿರಾಜವಿರಚಿತ ಕನ್ನಡಲಘುವಾಯುಸ್ತುತಿಃ ಸಮಾಪ್ತಾ||