Rudra devara suladhi(Vadirajaru)
ರುದ್ರದೇವರ ಸುಳಾದಿ – ವಾದಿರಾಜರು ಧ್ರುವತಾಳ ಅಂಬಿಕಾಪತಿ ಉಮಾಪತಿಯೆಂದು ವೇದ ತ್ರಿ- ಯಂಬಕನ ಗೌರಿಯರಸನ ತುತಿಸುತಿದಕೊ ಸಾಂಬಶಿವನೆಂಬುವನು ಇವನೆ ಆದಡೆ ಜಡೆಯ ಸಂಭ್ರಮದಿಂದ ಗಂಗೆ ಗರ್ವಿಸುವಳು ‘ಡಂಭ ಏಕೋರುದ್ರನದ್ವಿತೀಯವದನ್ತೌ’ ಯೆಂಬ ಶ್ರುತಿ ಇನ್ನೊಬ್ಬ ಶಿವನಿಗವಸಖನು ಒ- ಡಂಬಡದು ವಿಷ್ಣುವೆಂಬವತಾರ ಮೂಲರೂಪ ಸಂಭವಿಪ ಬ್ರಹ್ಮರುದ್ರರ ಸೃಷ್ಟಿಗೆ ಇಂಬು ಸಲ್ಲುವುದು ‘ಸೃಷ್ಟ್ಯಾಧಿಕಾ ಏಕೋ ಮಹಾನೀ’ ಯೆಂಬ ಹಿರಿಯರ ಮತವ ಸುಮತವೆಂದು ನಂಬು ದನುಜ ಸ್ತಂಭಸಂಭವ ರುದ್ರಶೀರ್ಷಕನು ಪುರಹರನೆ ಗಡ ಅಂಬುಜಾಕ್ಷ ಹಯವದನ ಅಖಿಳರೊಡೆಯ ||1|| ಮಠ್ಯತಾಳ ಆರು ಪುರಾಣ ಗೌರಿಯ …