ಮಹಾಭಾರತದ ಅಪರಿಚಿತ ಈತ – ಬರ್ಬರೀಕ
ಬರ್ಬರೀಕ, ಭೀಮಸೇನನ ಮೊಮ್ಮಗ. ಭೀಮಸೇನನ ಪುತ್ರ ಘಟೋತ್ಕಚನಿಗೆ ಅಹಿಲವತಿ ಎಂಬ ಪತ್ನಿಯಲ್ಲಿ ಹುಟ್ಟಿದ ಮಗ. ಇವನು ಬಿಲ್ವಿದ್ಯೆಯಲ್ಲಿ ಅಪ್ರತಿಮ ಶೂರ. ತಪಶ್ಚರ್ಯ ನಡೆಸಿ ಮಹಾದೇವನಾದ ರುದ್ರದೇವರಿಂದ ವರಗಳನ್ನು ಪಡೆದಿದ್ದ ಕೂಡಾ. ಬಿಲ್ಗಾರಿಕೆಯಲ್ಲಿ ಕರ್ಣಾರ್ಜುನರೂ ಇವನನ್ನು ಸರಿಗಟ್ಟಲಾರರು ಅನ್ನುವಷ್ಟು ಹೆಚ್ಚಿತ್ತು ಬರ್ಬರೀಕನ ಶೌರ್ಯ. ಇಂಥಾ ಬರ್ಬರೀಕ ಕುರುಕ್ಷೇತ್ರ ಯುದ್ಧ ಘೋಷಣೆಯಾದಾಗ ತಾನೂ ಯುದ್ಧದಲ್ಲಿ ಪಾಲ್ಗೊಳ್ಳುವೆನೆಂದು ರಣಾಂಗಣಕ್ಕೆ ಬರುತ್ತಾನೆ. ಆಗ ಕೃಷ್ಣ ಯುದ್ಧದ ತಯಾರಿ ನಡೆಸುತ್ತಾ, “ಕುರುಕ್ಷೇತ್ರ ಯುದ್ಧ ಮುಗಿಯಲು ಸುಮಾರು ಎಷ್ಟು ದಿನಗಳು ಬೇಕಾಗಬಹುದು?” ಎಂದು ಕೌರವ – …