Sri Vadeendra Teertharu – Aradhana Mahotsava

ಶ್ರೀವಾದೀಂದ್ರತೀರ್ಥರು

ಶ್ರೀವಾದೀಂದ್ರರು ಶ್ರೀರಾಯರ ಪೂರ್ವಾಶ್ರಮದ ಮರಿಮಕ್ಕಳು. ಶ್ರೀಉಪೇಂದ್ರತೀರ್ಥರಿಂದ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಸುಮಾರು 22 ವರ್ಷಗಳ ಕಾಲ ಶ್ರೀರಾಯರ ಮಠದ ಪೀಠಾಧಿಪತಿಗಳಾಗಿದ್ದರು. ಅವರು ಪೀಠಕ್ಕೆ ಬಂದಾಗ ದಕ್ಷಿಣ ಭಾರತದಲ್ಲಿ ರಾಜಕೀಯ ಪರಿಸ್ಥಿತಿ ಸರಿಯಾಗಿರಲಿಲ್ಲ. ಶ್ರೀಮಠದ ಆಸ್ತಿಯನ್ನು ರಕ್ಷಿಸಲು ಅವರು ಸಾಕಷ್ಟು ಶ್ರಮವಹಿಸಬೇಕಾಯಿತು. ಮಂತ್ರಾಲಯವನ್ನು ರಕ್ಷಿಸಲು ಆದವಾನಿ ಅಧಿಕಾರಿ ಮಝಫರ್ ಜಂಗ್ ನೊಡನೆ ಮಾತನಾಡಿ ಆ ಸ್ಥಳದ ಸನ್ನದನ್ನು ಮಾಡಿಸಿಕೊಂಡರು.

ಶ್ರೀವಾದೀಂದ್ರತೀರ್ಥರು ವೇದಶಾಸ್ತ್ರಗಳಲ್ಲಿ ಅಪ್ರತಿಮ ಪಾಂಡಿತ್ಯವನ್ನು ಹೊಂದಿದ್ದರು. ತತ್ವಪ್ರಕಾಶಿಕಾ ಹಾಗೂ ತತ್ವೋದ್ಯೋತ ಗ್ರಂಥಗಳಿಗೆ ಟಿಪ್ಪಣಿಯನ್ನು ರಚಿಸಿದ್ದಾರೆ. ‘ಭೂಗೋಳ ಖಗೋಳ ವಿಚಾರ’ ಎಂಬುದು ಅವರು ರಚಿಸಿದ ವಿಶಿಷ್ಟವಾದ ಕೃತಿ. ‘ಗುರುಗುಣಸ್ತವನ’ ವಾದೀಂದ್ರರ ಅಪ್ರತಿಮ ಕೃತಿ. ಶ್ರೀಹರಿಯಿಂದ ಆರಂಭಿಸಿ ಶ್ರೀಮಧ್ವಾಚಾರ್ಯರಿಂದ ಶ್ರೀರಾಘವೇಂದ್ರ ಗುರುಸಾರ್ವಭೌಮರವರೆಗಿನ ಎಲ್ಲ ಗುರುಗಳ ಸ್ತೋತ್ರ ಈ ಕೃತಿಯಲ್ಲಿ ಮಾಡಿದ್ದಾರೆ. ಅದ್ಭುತವಾದ ರಚನೆ.

೦ದಾರು ಜನಸ೦ದೋಹ ಮ೦ದಾರು ತರುಸನ್ನಿಭ೦
ವೃ೦ದಾರಕ ಗುರುಪ್ರಖ್ಯ೦ ವ೦ದೇ ವಾದೀ೦ದ್ರದೇಶಿಕ೦ ||

 

[More Info Click here]

Leave a Reply

Your email address will not be published. Required fields are marked *