ಶ್ರೀಮೋಹನದಾಸರು

ಬಡತನದ ಬೇಗೆಯಲ್ಲಿ ಬೆಂದ ಓರ್ವ ಅನಾಥ ತಾಯಿಯು ತನ್ನ ಮಗುವನ್ನು ಉಡಿಯಲ್ಲಿ ಕಟ್ಟಿಕೊಂಡು ತುಂಗೆಯ ಮಡುವಿಗೆ ಹಾರ ಹೊರಟಿದ್ದಳು. ಸುದೈವದಿಂದ ಅದು ಶ್ರೀ ವಿಜಯರಾಯರ ಕಣ್ಣಿಗೆ ಬಿದ್ದು ಅವರು ಧಾವಿಸಿ ಹೋಗಿ ಅದನ್ನು ತಡೆದರು.

ತುಂಗೆಯಲ್ಲಿ ಎಸೆಯ ಹೊರಟ ಅವಳನ್ನೂ; ಅವಳ ಮಗುವನ್ನೂ ತಡೆದು ಅವಳಿಂದ ಆ ಮಗುವನ್ನು ಪಡೆದರು. ಆ ಅನಾಥಳಿಗೆ ಆಶ್ರಯವಿತ್ತು ಕಾಪಾಡಿದರು. ಆ ಮಗುವನ್ನು ತೊಡೆಯ ಮೇಲೆ ಆಡಿಸಿ ಬೆಳಿಸಿ ದೊಡ್ಡವನನ್ನಾಗಿ ಮಾಡಿದರು.

ಚಿರಂಜೀವಿಯಾಗೆಲೆವೊ ಚಿನ್ನ ನೀನು ।
ಪರಮ ಭಾಗವತರ ಪಾದ ಧೂಳಿ ಧರಿಸುತಲೀ ।। ಎಂದು ಶ್ರೀ ವಿಜಯದಾಸರು ಹರಿಸಿದ್ದಾರೆ ನಮ್ಮ ಮೋಹನದಾಸರಿಗೆ.

[More Info…]

Leave a Reply

Your email address will not be published. Required fields are marked *