Sri Madhwacharyaru suladhi – By Vijaya Dasaru

Sri Madhwacharyaru suladhi (Vijaya dasaru) ಶ್ರೀಮಧ್ವಾಚಾರ್ಯರ ಮೇಲೆ ಸುಳಾದಿ – ಶ್ರೀವಿಜಯದಾಸರು ಧ್ರುವತಾಳ ಶ್ರೀಮಧ್ವಿಠಲ ಪಾದಾಂಬುಜ ಮಧುಪ ರಾಜಾ ಶ್ರೀಮದಾಚಾರ್ಯ ಧೈರ್ಯ ಯೋಗ ಧುರ್ಯಾ ಕಾಮವರ್ಜಿತ ಕೃಪಾಸಾಗರ ಯತಿರೂಪಾ ರೋಮ ರೋಮ ಗುಣಪೂರ್ಣ ಪರಣಾ ಸಾಮ ವಿಖ್ಯಾತ ಸಿದ್ಧ ಸುರರೊಳಗೆ ಪ್ರಸಿದ್ಧ ಸೀಮರಹಿತ ಮಹಿಮ ಭುವನ ಪ್ರೇಮ ತಾಮಸಜನದೂರ ದಂಡಕಮಂಡಲಧರ ಶ್ರೀ ಮಧ್ವ ಮುನಿರಾಯ ಶೋಭನ ಕಾಯ ಆ ಮಹಾ ಜ್ಞಾನದಾತ ಅನುಮಾನ ತೀರಥ ಕೋಮಲಮತಿಧಾರ್ಯ ವೈಷ್ಣವಾರ್ಯ ಕಾಮ ಸುತ್ರಾಮ ಶರ್ವ ಸುರನುತ ಗುರುಸಾರ್ವ ಭೌಮಾತಿ ಭಯನಾಶ …