ಗುರುಪುರ್ವ ಜಗನ್ನಾಥ – ದಾಸಸ್ಯಾಮಿತ ತೇಜಸಃ |
ತಸ್ಯಪಾದಾಬ್ಜ ಸಂಭೂತಾಃ – ರಜಾಂಸಿ ಶಿರಸಾವಹೇ ||
ರಾಘವೇಂದ್ರ ಕೃಪಾಪಾತ್ರಂ ಕೌತಾಳ ಕ್ಷೇತ್ರ ವಾಸಿನಮ್ ।
ನಾನಾ ಗ್ರಂಥ ಪ್ರಣೇತಾರಂ ಗುರುಜಗನ್ನಾಥ ಮಹಂ ಭಜೇ ।।
Sanskrit
राघवेंद्र कृपापात्रं कौताळ क्षेत्र वासिनम् ।
नाना ग्रंथ प्रणेतारं गुरुजगन्नाथ महं भजे ॥
Telugu
రాఘవేంద్ర కృపాపాత్రం కౌతాళ క్షేత్ర వాసినమ్ |
నానా గ్రంథ ప్రణేతారం గురుజగన్నాథ మహం భజే ||
Tamil
ராகவேம்த்ர க்ருபாபாத்ரம் கௌதாள க்ஷேத்ர வாஸிநம் |
நாநா க்ரம்த ப்ரணேதாரம் குருஜகந்நாத மஹம் பஜே ||
English
rAGavEMdra kRupApAtraM kautALa kShEtra vAsinam |
nAnA graMtha praNEtAraM gurujagannAtha mahaM BajE ||
” ಶ್ರೀ ಗುರು ಜಗನ್ನಾಥದಾಸರ ಸಂಕ್ಷಿಪ್ತ ಮಾಹಿತಿ “
ಹೆಸರು : ಶ್ರೀ ಸ್ವಾಮಿರಾಯ
ತಂದೆ : ಶ್ರೀ ವೆಂಕಟಗಿರಿಯಾಚಾರ್ಯರು
ತಾಯಿ : ಸಾಧ್ವೀ ಸೀತಮ್ಮ
ಜನ್ಮ ಸ್ಥಳ : ಕೋಸಿಗಿ
ಕಾಲ : ಕ್ರಿ ಶ 1837 – 1918
ಅಂಕಿಂತೋಪದೇಶ : ಶ್ರೀ ಕೃಷ್ಣವಿಠ್ಠಲರು
ಅಂಕಿತ : ಶ್ರೀ ಗುರು ಜಗನ್ನಾಥವಿಠ್ಠಲ
ಅಂಶ : ಶ್ರೀ ಆಹ್ಲಾದರಾಜರು
ಸ್ಥಳ : ಕೌತಾಳಂ, ಆದೊನಿ ತಾಲ್ಲೂಕು, ಕರ್ನೂಲ್ ಜಿಲ್ಲೆ – ಆಂಧ್ರಪ್ರದೇಶ
ಸಮಕಾಲೀನ ಯತಿಗಳು :
ಶ್ರೀ ರಾಯರ ಮಠದ ಶ್ರೀ ಸುಜ್ಞಾನೇಂದ್ರರು, ಶ್ರೀ ಸುಧರ್ಮೇಂದ್ರರು, ಶ್ರೀ ಸುಗುಣೇಂದ್ರರು, ಶ್ರೀ ಸುಪ್ರಜ್ಞೇ೦ದ್ರರು, ಸುಕೃತೀಂದ್ರರು, ಶ್ರೀ ಸುಶೀಲೇಂದ್ರರು – ಶ್ರೀ ವ್ಯಾಸರಾಜ ಮಠದ ಶ್ರೀ ವಿದ್ಯಾರತ್ನಾಕರತೀರ್ಥರು ಮತ್ತು ಶ್ರೀ ಕೂಡ್ಲಿ ಅಕ್ಷೋಭ್ಯತೀರ್ಥ ಮಠದ ಶ್ರೀ ರಘುದಾಂತತೀರ್ಥರು.
ಶಿಷ್ಯರು :
1. ಶ್ರೀ ವರದವಿಠ್ಠಲರು
2. ಶ್ರೀ ವರದೇಶವಿಠ್ಠಲರು
3. ಶ್ರೀ ವರದೇಂದ್ರವಿಠ್ಠಲರು
4. ಶ್ರೀ ಆನಂದವಿಠ್ಠಲರು
5. ಶ್ರೀ ಸುಂದರವಿಠ್ಠಲರು
6. ಶ್ರೀ ಜಗದೀಶವಿಠ್ಠಲರು
7. ಶ್ರೀ ಶ್ರೀನಿವಾಸವಿಠ್ಠಲರು
8. ಶ್ರೀ ಮುದ್ದು ಗುರು ಜಗನ್ನಾಥದಾಸರು
ಏನೂ ತಿಳಿಯದ ಶ್ರೀ ಸ್ವಾಮಿರಾಯರು ಕನ್ನಡ – ಸಂಸ್ಕೃತದಲ್ಲಿ ಕವಿಸಾರ್ವಭೌಮರಾದರು.
” ಶ್ರೀ ರಾಯರ ಮತ್ತು ಶ್ರೀ ಅಪ್ಪಾವರ ಪರಮಾನುಗ್ರ “
ಶ್ರೀ ವೆಂಕಟಗಿರಿಯಾಚಾರ್ಯ ದಂಪತಿಗಳಿಗೆ ಜೀವನದಲ್ಲಿ ಎಲ್ಲಾ ಸೌಭಾಗ್ಯಗಳಿದ್ದರೂ ಪುತ್ರ ಸಂತಾನವಿರಲಿಲ್ಲ. ಭಾವುಕರೂ, ಗುರುಭಕ್ತರಾದ ಇವರು ಕೋಸಗಿಯಿಂದ ಮಂತ್ರಾಲಯಕ್ಕೆ ಬಂದು ವಂಶೋದ್ಧಾರಕ ಪುತ್ರನನ್ನು ಅನುಗ್ರಹಿಸಬೇಕೆಂದು ಶ್ರೀ ಗುರುಸಾರ್ವಭೌಮರಲ್ಲಿ ಪ್ರಾರ್ಥಿಸಿ ಏಕಾಗ್ರಚಿತ್ತ ಮತ್ತು ಭಕ್ತಿ ಶ್ರದ್ಧೆಗಳಿಂದ ಸೇವೆ ಮಾಡಿದರು.
ಗುರುಗಳ ಸೇವೆ ವ್ಯರ್ಥವಾದೀತೇ? ” ವಿಶ್ವಾಸೋ ಫಲದಾಯಕ ” ಯೆಂಬಂತೆ ಆ ಕಾಲದಲ್ಲಿ ಇಬಾರಾಮಪುರ ಶ್ರೀ ಕೃಷ್ಣಾಚಾರ್ಯರೆಂಬ ಮಹಾನ್ ಸಾಧಕ – ಅಪರೋಕ್ಷ ಜ್ಞಾನಿಗಳೊಬ್ಬರಿದ್ದರು. ಸಜ್ಜನರ ಉದ್ಧಾರಕ್ಕಾಗಿಯೇ ಅವತರಿಸಿದ ಅಪೂರ್ವ ರತ್ನ. ಶ್ರೀಅಪ್ಪಾವರು ಶ್ರೀ ರಾಯರ ಅವಿಚ್ಚಿನ್ನ ಅಂತರಂಗ ಭಕ್ತರು!
ಶ್ರೀ ಅಪ್ಪಾವರು ಮತ್ತು ಶ್ರೀ ವೆಂಕಟಗಿರಿಯಾಚಾರ್ಯರು ಬಾಲ್ಯದಿಂದಲೇ ಸ್ನೇಹಿತರಾಗಿದ್ದರು. ಶ್ರೀ ಅಪ್ಪಾವರು ಯಾವ ಮುನ್ಸೂಚನೆಯೂ ಇಲ್ಲದಲೆ ಕೋಸಿಗಿಗೆ ಬಂದರು. ಆಧ್ಯಾತ್ಮ – ತತ್ತ್ವಜ್ಞಾನಗಳ ವಿಷಯವೇ ಇವರ ಚರ್ಚೆಯಾಗಿತ್ತು.
ಆ ಸಂದರ್ಭದಲ್ಲಿ ಶ್ರೀ ಆಚಾರ್ಯರು ತಮ್ಮ ಅಂತರಂಗದ ಅಳಲನ್ನು ಶ್ರೀ ಅಪ್ಪಾವರ ಬಳಿ ತೋಡಿಕೊಂಡರು ಹಾಗೂ ತಮಗೆ ಸತ್ಪುತ್ರ ಸಂತಾನವಾಗುವಂತೆ ಅನುಗ್ರಹಿಸಲು ಕೋರಿಕೊಂಡರು. ಶ್ರೀ ಅಪ್ಪಾವರು ಶ್ರೀ ಪಂಚಮುಖ ಪ್ರಾಣದೇವರ ಉಪಾಸಕರು. ಆಗ ಶ್ರೀ ಅಪ್ಪಾವರು..
ನಾನೇನು ಶಾಪಾನುಗ್ರಹ ಶಕ್ತನಲ್ಲ! ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು ನಿನಗೆ ಅನುಗ್ರಹಿಸುವರು. ನೀನು ಶ್ರೀ ಗುರುರಾಯರಿಗೆ ಮಾಡಿದ ಸೇವೆ ಎಂದಿಗೂ ವ್ಯರ್ಥವಾಗುವುದಿಲ್ಲ. ನೀನು ನಾಳೆ ನಮ್ಮ ಪೂಜಾ ಸಮಯದಲ್ಲಿ ಉಪಸ್ಥಿತನಿರು ಎಂದು ಹೇಳಿದರು!
ಆದಿನ ಶ್ರೀ ಅಪ್ಪಾವರು ಶ್ರೀ ಪಂಚಮುಖ ಪ್ರಾಣದೇವರನ್ನು ವಿಶೇಷವಾಗಿ ಪೂಜಿಸಿ ಭಕ್ತಿ ಪೂರ್ವಕ ಪ್ರಾರ್ಥಿಸುತ್ತಾ ತಮ್ಮ ಮಿತ್ರನಿಗೆ ಪುತ್ರ ಸಂತಾನವನ್ನು ಅನುಗ್ರಹಿಸುಯೆಂದು ಬೇಡುತ್ತಾ ದೇವರ ಪೆಟ್ಟಿಗೆಗೆ ಕೈ ಹಾಕಿದರು. ಆ ಪೆಟ್ಟಿಗೆಯಲ್ಲಿ ಒಂದು ಮುತ್ತು ಅವರ ಕೈಗೆ ಸಿಕ್ಕಿತು. ಆ ಮುತ್ತನ್ನು ಶ್ರೀ ವೆಂಕಟಗಿರಿಯಾಚಾರ್ಯರಿಗೆ ಕೊಡುತ್ತಾ…
” ಆಚಾರ್ಯಾ! ಚಿಂತಿಸಬೇಡ. ಶ್ರೀ ಹರಿವಾಯುಗುರುಗಳು ನಿನಗೆ ಮುತ್ತಿನಂಥಾ ಪುತ್ರನನ್ನು ಕರುಣಿಸುವರು ” ಎಂದರು. ಭಗವದ್ಭಕ್ತರ ಮಾತುಗಳೆಲ್ಲವೂ ” ವಾಚಮಥೋ೯ನುಧಾವತಿ ” ಅಲ್ಲವೇ?
ಅಂತೂ ಆ ದಂಪತಿಗಳ ಆಶೆ ಫಲಿಸಿತು. ಮುಂದೆ ಆ ದಂಪತಿಗಳಿಗೆ ಮಹಾ ಭಕ್ತನಾಗಿ ಕೋಸಗಿಯ ಕಣ್ಮಣಿಯಾಗಲಿರುವ ಮುತ್ತಿನಂಥಾ ಪುತ್ರ ಸಂತಾನವಾಯಿತು.
ಶ್ರೀ ವೆಂಕಟಗಿರಿಯಾಚಾರ್ಯರು ಆ ಮಗುವಿಗೆ ” ಸ್ವಾಮಿರಾಯ ” ಎಂದು ನಾಮಕರಣ ಮಾಡಿದರು.
ವಿದ್ಯಾ ಗುರುಗಳು : ಶ್ರೀ ರಾಘವೇಂದ್ರತೀರ್ಥ ಗುರುಸಾರ್ವಭೌಮರು
ಶ್ರೀ ರಾಯರು ಬುಡಮಲದೊಡ್ಡಿಯ ಶ್ರೀ ವ್ಯಾಸರಾಜ ಪ್ರತಿಷ್ಠಿತ ಶ್ರೀ ಮುಖ್ಯಪ್ರಾಣದೇವರ ಸನ್ನಿಧಾನದಲ್ಲಿ ಶ್ರೀ ಅಪ್ಪಾವರ ಸಮ್ಮುಖದಲ್ಲಿ ಶ್ರೀ ಸ್ವಾಮಿರಾಯರ ನಾಲಿಗೆಯ ಮೇಲೆ ಬೀಜಾಕ್ಷರ ಬರೆದು, ಶ್ರೀ ರಾಯರೇ ಸ್ವತಃ ಪಾಠ ಮಾಡಿದರು. ಸಕಲ ವಿದ್ಯಾ ಪಾರಂಗತರಾದ ಶ್ರೀ ಸ್ವಾಮಿರಾಯರು ಗೀರ್ವಾಣ ಭಾಷೆ ಹಾಗೂ ಕನ್ನಡದಲ್ಲಿ ನೂರಾರು ಕೃತಿಗಳನ್ನು ರಚಿಸಿದರು. ಕೋಸಿಗಿಯಲ್ಲಿ ಸಾಹಿತ್ಯದ ಮಳೆ ಸುರಿಯಿತು!!
ಅವತಾರ : ಶ್ರೀ ಅಪ್ಪಣ್ಣಾಚಾರ್ಯರು, ಲಚ್ಚಮರಿ ಶ್ರೀ ಬೆನಕಪ್ಪ. ಶ್ರೀ ಕರ್ಜಗಿ ದಾಸಪ್ಪ ( ಶ್ರೀ ಶ್ರೀದವಿಠ್ಠಲರು ) ಮತ್ತು ಶ್ರೀ ಸ್ವಾಮಿರಾಯರು ( ಶ್ರೀ ಗುರುಜಗನ್ನಾಥದಾಸರು )
ಶ್ರೀ ಗುರು ಜಗನ್ನಾಥದಾಸಾರ್ಯರ ಕೀರ್ತನೆಗಳಲ್ಲಿ ಜ್ಞಾನದ ಗಾಂಭೀರ್ಯವು ಪ್ರತಿಬಿಂಬಿತವಾಗಿದೆ. ಸರಸ ಸಜ್ಜನಿಕೆ ಒಡಮೂಡಿದೆ. ಪ್ರಮೇಯ ಜ್ಞಾನದ ರೇಖಾಂಕನವು ಶ್ರೀ ದಾಸರಾಯರ ಪದ್ಯ ಪದ್ಧತಿಯಲ್ಲಿ ಸ್ಫುಟವಾಗಿ ಗೋಚರಿಸುತ್ತದೆ. ಪ್ರಾಸಾದಿಕೆಯ ಪ್ರಾಸಾದದಲ್ಲಿ ಪ್ರಮೇಯ ರತ್ನಗಳನ್ನೆಲ್ಲ ಪಾರದರ್ಶಕವಾದ ತಮ್ಮ ಪ್ರತಿಭೆಯ ಗೋಲಕದಿಂದ ದರ್ಶನ ಮಾಡಿಸುತ್ತಾರೆ.
ಕನ್ನಡದಂತೆ ಸಂಸ್ಕೃತದಲ್ಲಿಯೂ ಶ್ರೀ ಗುರು ಜಗನ್ನಾಥದಾಸರಿಗೆ ಕವಿತ್ವ ಶಕ್ತಿ ಇದ್ದಿತು.
16ಕ್ಕೂ ಹೆಚ್ಚು ಸಂಸ್ಕೃತ ಗ್ರಂಥಗಳು
14ಕ್ಕೂ ಹೆಚ್ಚು ಸಂಸ್ಕೃತ ಸ್ತೋತ್ರ ಸಾಹಿತ್ಯಗಳು
200ಕ್ಕೂ ಅಧಿಕ ಲಘು ಕೃತಿಗಳು