Home

ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಪೂರ್ವಪೀಠಾಧಿಪತಿಗಳಾಗಿದ್ದ, ನಡೆದಾಡುವ ರಾಯರೆಂದು ಭಕ್ತಕೋಟಿಯಲ್ಲಿ ಪ್ರಖ್ಯಾತರಾಗಿದ್ದ ಶ್ರೀಸುಶಮೀಂದ್ರತೀರ್ಥರ ಸಮಾನಮನಸ್ಕ ಭಕ್ತರು ಪ್ರಾರಂಭಿಸಿರುವ ಸಾಮಾಜಿಕ ಸಂಸ್ಥೆ “ಶ್ರೀಸುಶಮೀಂದ್ರ ಸೇವಾ ಪ್ರತಿಷ್ಠಾನ”. ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರ ಅಭಿಪ್ರಾಯಗಳನ್ನು ಅವರ ಆಶಯದಂತೆಯೇ ಕ್ರಿಯಾರೂಪದಲ್ಲಿ ತಂದು, ಸಮಾಜದ ಎಲ್ಲ ವರ್ಗದ ಜನರ ಬದುಕು ರಾಯರ ಅನುಗ್ರಹದಿಂದ ಹಸನುಗೊಳಿಸುವ ಅವರ ಕನಸನ್ನು ಎಲ್ಲ ಸಾಧ್ಯವಾದ ರೀತಿಯಲ್ಲಿ ಸಾಕಾರಗೊಳಿಸುವುದು ಪ್ರತಿಷ್ಠಾನದ ಮುಖ್ಯ ಉದ್ದೇಶ. ಉತ್ತಮ ಸಮಾಜಕ್ಕೋಸ್ಕರ ಉತ್ತಮ ಮನಸ್ಸುಗಳ ನಿರ್ಮಾಣವೆನ್ನುವುದು ಕೇವಲ ಕೆಲವೇ ವ್ಯಕ್ತಿಗಳ ಮೂಲಕ ಆಗುವಂಥದಲ್ಲವಾದ್ದರಿಂದ ಈ ಮಹೋನ್ನತ ಕಾರ್ಯದಲ್ಲಿ ಸಜ್ಜನರ ಸಹಕಾರವನ್ನು ಪ್ರತಿಷ್ಠಾನವು ಸ್ವಾಗತಿಸುತ್ತದೆ.

Leave a Reply

Your email address will not be published. Required fields are marked *