Sri Sujayeendra Teerthara Aradhana
सुयमींद्र कराब्जोत्थं सुविद्याबोधकं सदा | सुमूलरामपूजाढ्यं सुजयींद्रगुरुं भजे || For more info Click – Sri Sujayeendra Teertharu
नमो अत्यंत दयालवे..!
सुयमींद्र कराब्जोत्थं सुविद्याबोधकं सदा | सुमूलरामपूजाढ्यं सुजयींद्रगुरुं भजे || For more info Click – Sri Sujayeendra Teertharu
ಶ್ರೀಪುರಂದರದಾಸರ ಪುಣ್ಯ ಸ್ಮರಣೆ :: ವಿದ್ವಾನ್ || ಬೆ.ನಾ. ವಿಜಯೀಂದ್ರಾಚಾರ್ಯರಿಂದ
ಮನ್ಮನೋಭೀಷ್ಟವರದಂ ಸರ್ವಾಭೀಷ್ಟ ಫಲಪ್ರದಮ್ | ಪುರಂದರಗುರುಂ ವಂದೇ ದಾಸಶ್ರೇಷ್ಠಂ ದಯಾನಿಧಿಮ್ || ಶ್ರೀಪುರಂದರದಾಸರು ಕನ್ನಡನಾಡು ಕಂಡ ಅಪ್ರತಿಮ ಧರ್ಮಪ್ರಸಾರಕರು. ಕನ್ನಡ ಭಾಷಗೆ ವಿಶಿಷ್ಟವಾದ ಗೀತೆಯನ್ನು ತಂದು ಕೊಟ್ಟ ಮಹಾ ಮಹಿಮರು. ಶ್ರೀಪುರಂದರದಾಸರ ಮೂಲಸ್ಥಾನ ಪಂಢರಪುರದ ಬಳಿಯ ಪುರಂದರಗಢ. ಪೂರ್ವಜೀವನದಲ್ಲಿ ಚಿನಿವಾರರಾಗಿದ್ದ ಇವರು ಅಪಾರ ಐಶ್ವರ್ಯವನ್ನು ಗಳಿಸಿದ್ದರು. ನವಕೋಟಿನಾರಾಯಣ ಎಂಬ ಪ್ರಶಸ್ತಿಯಲ್ಲಿ ಅವರ ಅಗಾಧಸಂಪತ್ತಿನ ಹಿರಿಮೆಯನ್ನು ಕಾಣಬಹುದು ಪೂರ್ವಜೀವನದಲ್ಲಿ ಜಿಪುಣಾಗ್ರೇಸರರೆಂದು ಸುಪ್ರಸಿದ್ದರಾಗಿದ್ದ ಇವರು ಅನಂತರ ಸರ್ವಸ್ವದಾನ ಮಾಡಿದ ದಾನಶೂರರೆನ್ನಿಸಿದ್ದು ವಿಶಿಷ್ಟ ದೈವಸಂಕಲ್ಪ. ನವಕೋಟಿ ಎನ್ನಿಸಿದ ಮಹಾಲಕ್ಷ್ಮೀಯನ್ನು ತೊರೆದು …
ಜಗದ್ಗುರು ಶ್ರೀಮನ್ಮಧ್ವಾಚಾರ್ಯರ ಮೂಲಮಹಾಸಂಸ್ಥಾನ ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿಗಳವರ ಮಠದ ಪೂರ್ವಪೀಠಾಧಿಪತಿಗಳಾಗಿದ್ದ, ನಡೆದಾಡುವ ರಾಯರೆಂದು ಭಕ್ತಕೋಟಿಯಲ್ಲಿ ಪ್ರಖ್ಯಾತರಾಗಿದ್ದ ಶ್ರೀಸುಶಮೀಂದ್ರತೀರ್ಥರ ಸಮಾನಮನಸ್ಕ ಭಕ್ತರು ಪ್ರಾರಂಭಿಸಿರುವ ಸಾಮಾಜಿಕ ಸಂಸ್ಥೆ “ಶ್ರೀಸುಶಮೀಂದ್ರ ಸೇವಾ ಪ್ರತಿಷ್ಠಾನ”. ಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರ ಅಭಿಪ್ರಾಯಗಳನ್ನು ಅವರ ಆಶಯದಂತೆಯೇ ಕ್ರಿಯಾರೂಪದಲ್ಲಿ ತಂದು, ಸಮಾಜದ ಎಲ್ಲ ವರ್ಗದ ಜನರ ಬದುಕು ರಾಯರ ಅನುಗ್ರಹದಿಂದ ಹಸನುಗೊಳಿಸುವ ಅವರ ಕನಸನ್ನು ಎಲ್ಲ ಸಾಧ್ಯವಾದ ರೀತಿಯಲ್ಲಿ ಸಾಕಾರಗೊಳಿಸುವುದು ಪ್ರತಿಷ್ಠಾನದ ಮುಖ್ಯ ಉದ್ದೇಶ. ಉತ್ತಮ ಸಮಾಜಕ್ಕೋಸ್ಕರ ಉತ್ತಮ ಮನಸ್ಸುಗಳ ನಿರ್ಮಾಣವೆನ್ನುವುದು ಕೇವಲ ಕೆಲವೇ ವ್ಯಕ್ತಿಗಳ ಮೂಲಕ ಆಗುವಂಥದಲ್ಲವಾದ್ದರಿಂದ …