“ಜಗದ್ಗುರು ಶ್ರೀಸುಧೀಂದ್ರತೀರ್ಥರು”

‘ಜಗದ್ಗುರು ಶ್ರೀಸುಧೀಂದ್ರತೀರ್ಥರು’ ಶ್ರೀಹಂಸನಾಮಕನ ಸತ್ಪರಂಪರೆಯಲ್ಲಿ, ಶ್ರೀಮನ್ಮಧ್ವಾಚಾರ್ಯರಿಂದ ಹದಿನೈದನೇಯ ಪೀಠಾಧಿಪತಿಗಳಾಗಿ ಶ್ರೀಮನ್ಮಧ್ವಮತವನ್ನು ವಿಶಿಷ್ಟ ಆಯಾಮದಲ್ಲಿ ಪ್ರತಿಷ್ಠಾಪನೆ ಮಾಡಿದವರೇ ಶ್ರೀಸುಧೀಂದ್ರತೀರ್ಥರು.  ಸಕಲವಿದಜನಕುಮುದವನ ಕೌಮುದೀಶರಾದ, ಭಗವಂತನ ವಿಶಿಷ್ಟಕರುಣೆಗೆ ಪಾತ್ರರಾದ, ಶ್ರೀಸುರೇಂದ್ರತೀರ್ಥರೇ ಇವರ ಆಶ್ರಮ ಗುರುಗಳು, ಚತುಷ್ಷಷ್ಟಿಕಲಾಪ್ರಾವೀಣ್ಯದಿಂದ ಆಸ್ತಿಕ್ಯವನ್ನು ಪುಷ್ಟೀಕರಿಸಿದ, ಚತುರಧಿಕಶತಗ್ರಂಥರತ್ನಪ್ರಣೇತರಾದ (104 ಗ್ರಂಥಗಳನ್ನು ಕರುಣಿಸಿದ), ಚಾತುರ್ಯಕ್ಕೆ ಹೆಸರಾದ ಶ್ರೀವಿಜಯೀಂದ್ರತೀರ್ಥ ಗುರುಸಾರ್ವಭೌಮರು ಇವರ ಗುರುಗಳಾದರೇ, ನಾಸ್ತಿಕ್ಯವನ್ನು ಒದ್ದೋಡಿಸಿದ, ಆಸ್ತಿಕರ ಆರಾಧ್ಯರಾದ, ಶ್ರೀಮನ್ಮಧ್ವಮತಸಂವರ್ಧಕರಾದ ಶ್ರೀಮನ್ಮಂತ್ರಾಲಯಪ್ರಭುಗಳು, ಹಾಗೂ ತಪಸ್ವಿಗಳಾದ ಗ್ರಂಥಕಾರರಾದ ಶ್ರೀಯಾದವೇಂದ್ರತೀರ್ಥರು ಇವರ ವಿದ್ಯಾಶಿಷ್ಯರು, ಆಶ್ರಮಶಿಷ್ಯರು. ಇಂತಹ ಲೋಕೋತ್ತರ ಕಾರ್ಯಗಳನ್ನು ಮಾಡಿದ ಗುರುಗಳನ್ನೂ, ಶಿಷ್ಯರನ್ನು ಪಡೆದ …

ಶ್ರೀರಾಘವೇಂದ್ರವಿಜಯದ ಕಣ್ಣಲ್ಲಿ ಶ್ರೀರಾಯರ ಅವತಾರ

ಶ್ರೀರಾಘವೇಂದ್ರವಿಜಯದ ಕಣ್ಣಲ್ಲಿ ಶ್ರೀರಾಯರ ಅವತಾರ ಗುರುಸಾರ್ವಭೌಮರ ವರ್ಧಂತೀ ಮಹೋತ್ಸವ – ಶ್ರೀರಾಯರು ಭೂಲೋಕದಲ್ಲಿ ಅವತರಿಸಿದ ಪುಣ್ಯಪ್ರದ ದಿವಸ. ಇತಿಹಾಸದುದ್ದಕ್ಕೂ ತಮ್ಮ ಪರಾಕ್ರಮ,ಅನೇಕಕಲಾಪ್ರಾವೀಣ್ಯದಿಂದ, ಪಾಂಡಿತ್ಯಾದಿ ಸದ್ಗುಣಗಳಿಂದ ಜಗದ್ವಿಖ್ಯಾತವಾದ ಮನೆತನದಲ್ಲಿ ಸಕ್ಷಾತ್ ಪ್ರಹ್ಲಾದರಾಜರೇ ಅವತರಿಸಿದ ಪರಮಮಂಗಲಕರ ದಿನ. ಶ್ರೀರಾಘವೇಂದ್ರಗುರುಸಾರ್ವಭೌಮರ ದಿವ್ಯವಾದ ಚರಿತ್ರೆಯನ್ನು ತಿಳಿಸುವ ಮಹೋಪಕಾರವನ್ನು ಮಾಡಿದ ನಾರಾಯಣಾಚಾರ್ಯರ ಆಪ್ತತ್ವ, ಈ ಗ್ರಂಥದ ಪ್ರಸ್ತುತಿಯ ಹಿನ್ನೆಲೆ, ಆ ಗ್ರಂಥದಲ್ಲಿ ಪ್ರತಿಪಾದಿತವಾಗಿರುವ ಮಧ್ವವಿಜಯದ ಪ್ರತಿಬಿಂಬತ್ವ ಇವೆಲ್ಲವೂ ಶ್ರೀರಾಘವೇಂದ್ರವಿಜಯದ ಪರಮಪ್ರಾಮಾಣಿಕತ್ವವನ್ನು, ಶ್ರೆಷ್ಠತ್ವವನ್ನು ತಿಳಿಸುವ ಪ್ರಮುಖ ವಿಚಾರಗಳು. ಶ್ರೀರಾಘವೇಂದ್ರಗುರುರಾಜರೇ ಇದನ್ನು ಪರಿಶೀಲಿಸಿ ಪ್ರಮಾಣೀಕರಿಸಿರುವದರಿಂದ ಇದರ ಮೌಲ್ಯ …

ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ.

ಶ್ರೀರಾಘವೇಂದ್ರವಿಜಯ ಉಲ್ಲೇಖಿಸುವ ಶ್ರೀರಾಘವೇಂದ್ರತೀರ್ಥರ ಪಟ್ಟಾಭಿಷೇಕ. ವೇದಾಂತೇತಿಹಾಸದಲ್ಲಿ ಶ್ರೀರಾಘವೇಂದ್ರಗುರುಸಾರ್ವಭೌಮರ ಸ್ಥಾನದ ಪರಿಚಯವನ್ನು ಪ್ರಯಾಸದಿಂದ ತಿಳಿಯುವ ಅಗತ್ಯ ಸರ್ವಥಾ ಇಲ್ಲ, ಕಾರಣ ಅದು ಸರ್ವಜನನಿತವಾದ ವಿಷಯ. ಶ್ರೀಪದ್ಮನಾಭತೀರ್ಥರು, ಶ್ರೀಮಟ್ಟೀಕಾಕೃತ್ಪಾದರು, ಶ್ರೀವಿಬುಧೇಂದ್ರರು-ಶ್ರೀಜಿತಾಮಿತ್ರರು, ಶ್ರೀಸುರೇಂದ್ರರು, ಶ್ರೀವಿಜಯೀಂದ್ರರು, ಶ್ರೀಸುಧೀಂದ್ರ-ಶ್ರೀರಾಘವೇಂದ್ರರು, ಶ್ರೀಸುಮತೀಂದ್ರ-ಶ್ರೀವಾದೀಂದ್ರರು, ಶ್ರೀವಸುಧೇಂದ್ರ-ಶ್ರೀವರದೇಂದ್ರ-ಶ್ರೀಧೀರೇಂದ್ರರು ಹೀಗೆ ಮಹೋನ್ನತ ಯತಿಪರಂಪರೆಯ ಆ ವಿದ್ಯಾಪ್ರಭಾವ, ಗ್ರಂಥನಿರ್ಮಾಣ, ವಾದಿ-ದಿಗ್ವಿಜಯಗಳು ಮಾತ್ರವಲ್ಲದೇ ಅವರು ಸಮಾಜದ ಕೊನೆಯ ವ್ಯಕ್ತಿಯ ಮೇಲೂ ಮಾಡಿದ ಪರಮಾನುಗ್ರಹ ಪ್ರತ್ಯಕ್ಷಸಿದ್ಧ. ಹೀಗೆ ಶ್ರೀಮನ್ಮಧ್ವಾಚಾರ್ಯರಿಂದ ಪ್ರವಹಿಸಿದ ವಿಶಿಷ್ಟವಾದ ಪರಂಪರೆಯಲ್ಲಿ ಉದಯಿಸಿದ ಒಬ್ಬೊಬ್ಬ ಯತಿಗಳೂ ಕೂಡ ಶ್ರೀಮೂಲರಾಮನಿಗರ್ಪಿಸಿದ ನಕ್ಷತ್ರಮಾಲೆಯ ಹೊಳೆಯುವ ನಕ್ಷತ್ರಗಳು. ಅಂತಹ …

ಮಹಾಭಾರತದ ಅಪರಿಚಿತ ಈತ – ಬರ್ಬರೀಕ

ಬರ್ಬರೀಕ, ಭೀಮಸೇನನ ಮೊಮ್ಮಗ. ಭೀಮಸೇನನ ಪುತ್ರ ಘಟೋತ್ಕಚನಿಗೆ ಅಹಿಲವತಿ ಎಂಬ ಪತ್ನಿಯಲ್ಲಿ ಹುಟ್ಟಿದ ಮಗ. ಇವನು ಬಿಲ್ವಿದ್ಯೆಯಲ್ಲಿ ಅಪ್ರತಿಮ ಶೂರ. ತಪಶ್ಚರ್ಯ ನಡೆಸಿ ಮಹಾದೇವನಾದ ರುದ್ರದೇವರಿಂದ ವರಗಳನ್ನು ಪಡೆದಿದ್ದ ಕೂಡಾ. ಬಿಲ್ಗಾರಿಕೆಯಲ್ಲಿ ಕರ್ಣಾರ್ಜುನರೂ ಇವನನ್ನು ಸರಿಗಟ್ಟಲಾರರು ಅನ್ನುವಷ್ಟು ಹೆಚ್ಚಿತ್ತು ಬರ್ಬರೀಕನ ಶೌರ್ಯ. ಇಂಥಾ ಬರ್ಬರೀಕ ಕುರುಕ್ಷೇತ್ರ ಯುದ್ಧ ಘೋಷಣೆಯಾದಾಗ ತಾನೂ ಯುದ್ಧದಲ್ಲಿ ಪಾಲ್ಗೊಳ್ಳುವೆನೆಂದು ರಣಾಂಗಣಕ್ಕೆ ಬರುತ್ತಾನೆ. ಆಗ ಕೃಷ್ಣ ಯುದ್ಧದ ತಯಾರಿ ನಡೆಸುತ್ತಾ, “ಕುರುಕ್ಷೇತ್ರ ಯುದ್ಧ ಮುಗಿಯಲು ಸುಮಾರು ಎಷ್ಟು ದಿನಗಳು ಬೇಕಾಗಬಹುದು?” ಎಂದು ಕೌರವ – …

ಬಾವಿಯ ನೀರನ್ನು ಸಿಹಿಯಾಗಿಸಿದ ಸುಶಮೀಂದ್ರರು

ಶ್ರೀಹರಿವಾಯುಗುರುಭ್ಯೋ ನಮಃ ಶ್ರೀಸುಶಮೀಂದ್ರಯತೀಶ್ವರೋ ನ್ಯಾಸಮಣಿಃ ವಿಜಯಂ ದದ್ಯಾನ್ಮಮ 2001ರ ವರ್ಷದ ಏಪ್ರಿಲ್ ತಿಂಗಳದು. ಮಂತ್ರಾಲಯದಲ್ಲಿ ನೀರಿನ ಬಹಳ ತೀವ್ರವಾದ ಸಮಸ್ಯೆಯು ಪ್ರಾರಂಭವಾಗಿತ್ತು. ಮಠದಲ್ಲಿ ಹಿಂದೆ ಯಾವುದೋ ಕಾರಣಗಳಿಂದ ಮುಚ್ಚಲ್ಪಟ್ಟಿದ್ದ ಬಾವಿಯೊಂದನ್ನು ಪೂಜ್ಯ ಶ್ರೀಶ್ರೀಸುಶಮೀಂದ್ರತೀರ್ಥ ಶ್ರೀಪಾದಂಗಳವರು ಮತ್ತೆ ತೆಗೆಸುವ ಆಲೋಚನೆಯನ್ನು ಮಾಡಿದರು. ಆಗ ಮಠದ ಅನುಭವಿಗಳೊಂದಿಬ್ಬರು “ಆ ಬಾವಿಯನ್ನು ತೆಗೆಸುವುದು ಬೇಡ” ಎಂಬ ಸಲಹೆಯನ್ನಿತ್ತರು. ವಾಸ್ತು ದೋಷದಿಂದಾಗಿ ಅದನ್ನು ಮುಚ್ಚಲಾಗಿತ್ತು ಎಂದು ಅವರು ಕಾರಣವನ್ನಿತ್ತರು. ಆದರೆ ಶ್ರೀಗಳವರು “ಈ ನೀರಿನ ಸಮಸ್ಯೆಯು ಈ ವರ್ಷಕ್ಕೆ ಮಾತ್ರ ಬಂದಿಲ್ಲ. ಇನ್ನು …

ಶ್ರೀವಿಜಯೀಂದ್ರತೀರ್ಥರ – ಶ್ರೀಅಪ್ಪಯ್ಯ ದೀಕ್ಷಿತರ (104)ಗ್ರಂಥಗಳು

ಶ್ರೀವಿಜಯೀಂದ್ರತೀರ್ಥರ – ಶ್ರೀಅಪ್ಪಯ್ಯ ದೀಕ್ಷಿತರ ಗ್ರಂಥಗಳು (104) ಶ್ರೀವಿಜಯೀಂದ್ರತೀರ್ಥರ ಗ್ರಂಥಗಳು 1. ಬ್ರಹ್ಮಸೂತ್ರ ಭಾಷ್ಯ ಟೀಕಾ ಟಿಪ್ಪಣಿ ತತ್ತ್ವಮಾಣಿಕ್ಯ ಪೇಟಿಕಾ 2. ಬ್ರಹ್ಮಸೂತ್ರ ನ್ಯಾಯ ಸಂಗ್ರಹ (ಪ್ರಕಟಿತ) 3. ಬ್ರಹ್ಮಸೂತ್ರದ ಮೇಲೆ ನಯಮುಕುರ. 4. ಬ್ರಹ್ಮಸೂತ್ರದ ಮೇಲೆ ನಯ ಮಂಜರಿ (ಪ್ರಕಟಿತ) 5. ಬ್ರಹ್ಮಸೂತ್ರ ಅಧಿಕರಣ ನ್ಯಾಯಮಾಲಾ 6. ಅಧಿಕರಣ ರತ್ನಮಾಲಾ 7. ನ್ಯಾಯಮೌಕ್ತಿಕ ಮಾಲಾ 8. ಅದ್ವೈತ ಶಿಕ್ಷಾ (ಪ್ರಕಟಿತ) 9. ಅಪ್ಪಯ್ಯಕಪೋಲಚಪೇಟಿಕಾ 10. ತುರೀಯ ಶಿವ ಖಂಡನಂ (ಪ್ರಕಟಿತ) 11. ಭೇದ ವಿದ್ಯಾ ವಿಲಾಸಃ …

ಭಕ್ತಾನಾಂ ಮಾನಸಾಂಭೋಜ…

‘ಭಕ್ತಾನಾಂ ಮಾನಸಾಂಭೋಜ…’ 25-06-2014, ಶ್ರೀವಿಜಯೀಂದ್ರತೀರ್ಥರ 400ನೇ ವರ್ಷದ ಆರಾಧನೆ! ಕುಂಭಕೋಣದ ಶ್ರೀವಿಜಯೀಂದ್ರತೀರ್ಥರ ಮಠದಲ್ಲಿ ಸಂಭ್ರಮದ ವಾತಾವರಣ. ಅಮೂಲ್ಯವಾದ ಈ ಶುಭ ಸಂಧರ್ಭದಲ್ಲಿ, ಭಕ್ತಿಯಿಂದ-ವೈಭವದಿಂದ ನಡೆದ ಎಲ್ಲಾ ಧಾರ್ಮಿಕ, ಸಾಂಸ್ಕೃತಿಕ ಸಂಭ್ರಮಾಚರಣೆಯ ರೂವಾರಿಗಳು – ಪರಮಪೂಜ್ಯ 1008 ಶ್ರೀಶ್ರೀಸುಬುಧೇಂದ್ರತೀರ್ಥ ಶ್ರೀಪಾದರು. ಈ ಎಲ್ಲಾ ಕಾರ್ಯಕ್ರಮದ ಕೇಂದ್ರ ಬಿಂದುವಾದದ್ದು ಮಾತ್ರ ಶ್ರೀಸುಬುಧೇಂದ್ರತೀರ್ಥರು ಆಚರಿಸಿದ ಅಕ್ಷರದ ಆರಾಧನೆ – ಅರ್ಥಾತ್ ನೂತನ ಗ್ರಂಥಗಳನ್ನು ಪ್ರಕಾಶಿಸಿ, ಬಿಡುಗೊಡಗೊಳಿಸಿದ್ದು. ಅವರು ಸಮರ್ಪಿಸಿದ ಗ್ರಂಥರಾಶಿಗಳಲ್ಲಿ, ನಮ್ಮ ಶ್ರೀಸುಶಮೀಂದ್ರ ಸೇವಾ ಪ್ರತಿಷ್ಠಾನದ ‘ಭಕ್ತಾನಾಂ ಮಾನಸಾಂಭೋಜ…’ ಎಂಬ ಸಂಪುಟವೂ …

Sri Sripadarajaru

ಚನ್ನಪಟ್ಟಣ ತಾಲೂಕಿನ ಹತ್ತಿರ ಅಬ್ಬೂರು ಗ್ರಾಮದಲ್ಲಿ ಮನೆ ಮಾಡಿಕೊಂಡಿದ್ದ ಶ್ರೀಶೇಷಗಿರಿ ಆಚಾರ್ಯರು ಮತ್ತು ಗಿರಿಯಮ್ಮನವರಲ್ಲಿ ಶ್ರೀಲಕ್ಷ್ಮೀನಾರಾಯಣನ ಅವತಾರವಾಯಿತು. ಇದೆ ಬಾಲಕನೇ ಮುಂದೆ ಶ್ರೀ ಶ್ರೀಪಾದರಾಜ ಎಂಬ ಹೆಸರಿನಿಂದ ವಿಶ್ವ ವಿಖ್ಯಾತರಾದರು. ಆ ಬಾಲಕ ಚಿಕ್ಕವನಿದ್ದಾಗಲೇ ಕಲ್ಲು, ಮಣ್ಣುಗಳಿಂದ ದೇವರ ಮೂರ್ತಿಗಳನ್ನು ಮಾಡಿ ಗೆಳೆಯರ ಜತೆಗೂಡಿ ಪೂಜಿಸಿ ಹಾಡು ಹಾಡಿ ಧ್ಯಾನ ಮಾಡಿ ಗಾನದಲ್ಲಿ ಮೈಮರೆತ್ತಿದ್ದರಂತೆ!! ಮುಂದೆ ಶ್ರೀ ಶ್ರೀಪಾದರಾಜರು ದಾಸಕೂಟದ ಕುಲದೇವತೆಯಾದ ಶ್ರೀವಿಠ್ಠಲನ ದರ್ಶನಕ್ಕೆಂದು ಪಂಢರಪುರಕ್ಕೆ ದಿಗ್ವಿಜಯ ಮಾಡಿದರು. ಅಲ್ಲಿ ವಿಠ್ಠಲನ ದರ್ಶನ ತೆಗೆದುಕೊಂಡು ತಮ್ಮ ವಾಸಸ್ಥಾನಕ್ಕೆ …

Sri Vadeendra Teertharu – Aradhana Mahotsava

ಶ್ರೀವಾದೀಂದ್ರತೀರ್ಥರು ಶ್ರೀವಾದೀಂದ್ರರು ಶ್ರೀರಾಯರ ಪೂರ್ವಾಶ್ರಮದ ಮರಿಮಕ್ಕಳು. ಶ್ರೀಉಪೇಂದ್ರತೀರ್ಥರಿಂದ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಸುಮಾರು 22 ವರ್ಷಗಳ ಕಾಲ ಶ್ರೀರಾಯರ ಮಠದ ಪೀಠಾಧಿಪತಿಗಳಾಗಿದ್ದರು. ಅವರು ಪೀಠಕ್ಕೆ ಬಂದಾಗ ದಕ್ಷಿಣ ಭಾರತದಲ್ಲಿ ರಾಜಕೀಯ ಪರಿಸ್ಥಿತಿ ಸರಿಯಾಗಿರಲಿಲ್ಲ. ಶ್ರೀಮಠದ ಆಸ್ತಿಯನ್ನು ರಕ್ಷಿಸಲು ಅವರು ಸಾಕಷ್ಟು ಶ್ರಮವಹಿಸಬೇಕಾಯಿತು. ಮಂತ್ರಾಲಯವನ್ನು ರಕ್ಷಿಸಲು ಆದವಾನಿ ಅಧಿಕಾರಿ ಮಝಫರ್ ಜಂಗ್ ನೊಡನೆ ಮಾತನಾಡಿ ಆ ಸ್ಥಳದ ಸನ್ನದನ್ನು ಮಾಡಿಸಿಕೊಂಡರು. ಶ್ರೀವಾದೀಂದ್ರತೀರ್ಥರು ವೇದಶಾಸ್ತ್ರಗಳಲ್ಲಿ ಅಪ್ರತಿಮ ಪಾಂಡಿತ್ಯವನ್ನು ಹೊಂದಿದ್ದರು. ತತ್ವಪ್ರಕಾಶಿಕಾ ಹಾಗೂ ತತ್ವೋದ್ಯೋತ ಗ್ರಂಥಗಳಿಗೆ ಟಿಪ್ಪಣಿಯನ್ನು ರಚಿಸಿದ್ದಾರೆ. ‘ಭೂಗೋಳ ಖಗೋಳ ವಿಚಾರ’ …

ಶ್ರೀಮೋಹನದಾಸರು

ಬಡತನದ ಬೇಗೆಯಲ್ಲಿ ಬೆಂದ ಓರ್ವ ಅನಾಥ ತಾಯಿಯು ತನ್ನ ಮಗುವನ್ನು ಉಡಿಯಲ್ಲಿ ಕಟ್ಟಿಕೊಂಡು ತುಂಗೆಯ ಮಡುವಿಗೆ ಹಾರ ಹೊರಟಿದ್ದಳು. ಸುದೈವದಿಂದ ಅದು ಶ್ರೀ ವಿಜಯರಾಯರ ಕಣ್ಣಿಗೆ ಬಿದ್ದು ಅವರು ಧಾವಿಸಿ ಹೋಗಿ ಅದನ್ನು ತಡೆದರು. ತುಂಗೆಯಲ್ಲಿ ಎಸೆಯ ಹೊರಟ ಅವಳನ್ನೂ; ಅವಳ ಮಗುವನ್ನೂ ತಡೆದು ಅವಳಿಂದ ಆ ಮಗುವನ್ನು ಪಡೆದರು. ಆ ಅನಾಥಳಿಗೆ ಆಶ್ರಯವಿತ್ತು ಕಾಪಾಡಿದರು. ಆ ಮಗುವನ್ನು ತೊಡೆಯ ಮೇಲೆ ಆಡಿಸಿ ಬೆಳಿಸಿ ದೊಡ್ಡವನನ್ನಾಗಿ ಮಾಡಿದರು. ಚಿರಂಜೀವಿಯಾಗೆಲೆವೊ ಚಿನ್ನ ನೀನು । ಪರಮ ಭಾಗವತರ ಪಾದ …