Sri vayudevarige nitavada(Vayu devara 32 lakshanagalu)

ಶ್ರೀವಾಯುದೇವರ 32 ಲಕ್ಷಣಗಳು

ಶ್ರೀವಾಯುದೇವರಿಗೆ ನೀತವಾದ |ಮೂವತ್ತೆರಡು ಸುಲಕ್ಷಣಗಳನು ವರ್ಣಿಸುವೆ ||ಪ||

ತಾಲು ಜಾನುಗಳು ಸ್ತನ ತುದಿಯುನಾಸಿಕಚಕ್ಷು |ನಾಲಕ್ಕೊಂದು ದೀರ್ಘ ಜಂಘ ಗ್ರೀವ ||
ಆಲಿಂಗ ಪೃಷ್ಠ ನಾಲ್ಕು ಹೃಸ್ವ ಕೇಶರದ |ಮೇಲಾದ ತ್ವಕು ಬೆರಳುನಖಪಂಚ ಸೂಕ್ಷ್ಮ ||1||

ಕಕ್ಷಿ ಕುಕ್ಷಿಯು ವಕ್ಷಕರ್ಣನಖಸ್ಕಂದಾರು |ರಕ್ಷಘ್ನನಿಗೆ ಶೋಭಿಪವು ಉನ್ನತ ||
ಅಕ್ಷಿಚರಣಕರನಖಅಧರಜಿಹ್ವೇಣುಜಿಹ್ವೆ|ಮೋಕ್ಷದನ ಈ ಏಳು ಅವಯವವು ರಕ್ತ ||2||

ಸತ್ವ ನಾಭಿಯು ಸ್ವರವು ಈ ಮೂರು ಗಂಭೀರ |ಉತ್ತಮಲಲಾಟಉರದ್ವಯ ವಿಸ್ತಾರಾ ||
ಸತ್ಯ ಸಂಕಲ್ಪ ಶ್ರೀ ಪ್ರಾಣೇಶ ವಿಠಲನ |ಭೃತ್ಯೋತ್ತಮಗೆ ತಕ್ಕುವಿವಾರಿಗಿಲ್ಲ||3||