ಭೀಮಸೇನ ಭಾಮಿನಿಯಾದನು ||ಪ||
ಭೀಮಸೇನ ಭಾಮಿನಿಯಾಗಲುಪ್ರೇಮದ ಸತಿಯ ಕಾಮಿಸಿದವನ
ಝಾಮರಾತ್ರಿಗೆ ಸೀಳುವೆನೆನ್ನುತಸಾಮಜವರದನ ಪಾಡುತಲಿ ||ಅನು.ಪ||
ರಾಜಾಧಿರಾಜನು ಗಜಪುರದಲ್ಲಿ
ಜೂಜಾಡಿ ತಮ್ಮ ರಾಜ್ಯವನು ಸೋತು
ವಿಜಯಮುಖ್ಯ ಅನುಜರೊಡಗೂಡಿ
ಭುಜಂಗಶಾಯಿಯ ಭಜಿಸುತ್ತ
ಸೂಜಿಮೊನೆಯಷ್ಟು ಗೋಜಿಲ್ಲದೆ ಬೇರೆ
ವ್ಯಾಜದಿಂದ ರೂಪಮಾಜಿಕೊಂಡು ಪೋಗೆ
ರಾಜ ಮತ್ಸ್ಯನೊಳು ಭೋಜನ ಮಾಡುತ್ತ
ಪೂಜಿಸಿಕೊಂಬೋ ಸೋಜಿಗವೇನಿದು||1||
ಮಾನಿನಿ ದ್ರೌಪದಿ ಶ್ರೇಣಿಯೊಳು ಬರುತ
ತ್ರಾಣಿ ವಿರಾಟನ ರಾಣಿಯು ಕಾಣುತ
ಧ್ಯಾನಿಸಿ ಯಾರೆಂದು ಮನ್ನಿಸಿ ಕೇಳಲು
ಮುನ್ನಿನ ಸಂಗತಿ ಪೇಳಿದಳು
ಆಣಿಮುತ್ತಿನಂಥಾ ವಾಣಿಯ ಕೇಳಲು
ಕ್ಷೋಣಿಲಿ ನಿನ್ನಂಥ ಜಾಣೆಯ ಕಾಣೆನು
ಪ್ರಾಣ ನೀನೆನಗೆ ವೇಣಿ ಹಾಕೆನುತ
ಪಾಣಿ ಪಿಡಿದು ಕರೆತಂದಳಾಗ||2||
ಈಶ ಕೇಳೊ ಪರದೇಶದಿಂದೊಬ್ಬಳು
ಕೇಶಕಟ್ಟುವಂಥ ವೇಷದಿ ಬಂದಳು
ಸಾಸಿರಮುಖದ ಶೇಷನೀರೂಪವ
ಲೇಶವು ತಾ ವರ್ಣಿಸಲರಿ
ಯನುವಾಸಮಾಡುವೆನು ಮಾಸಯೀರಾರು
ಗ್ರಾಸವ ಕೊಟ್ಟೆನ್ನ ಪೋಷಿಸೆಂದಾ ನುಡಿ
ದೋಸನು ಪೇಳಲು ಮೀಸೆಯ ತಿರುವುತ
ಮೀಸಲೆನಗೆಂದು ತೋಷಿಸಿದ ||3||
ನಾರಿ ಅಕ್ಕನಲ್ಲಿ ಸೇರಿಕೊಂಡಿಹಳು
ಮೋರೆಯ ನೋಡಲು ಭಾರಿ ಗುಣವಂತೆ
ತೋರುತಲಿದೆ ಎನ್ನ ಸೇರಿದ ಮೇಲನು-
ಚಾರಿ ಎನಿಸುವೆ ಮೀರಿದ್ದಕ್ಕೆ
ವಾರೆಗಣ್ಣಿಲೊಂದು ಸಾರಿ ನೋಡ್ಯಾಳೆಂದು
ಬಾರಿ ಬಾರಿಯಾಕೆ ಮೋರೆ ನೋಡುತಿರೆ
ನೀರೆ ಆ ಕ್ರೂರನ್ನ ಘೋರರೂಪಕಂಜಿ
ಮೋರೆ ತೋರದೆ ಗಂಭೀರದಿಂದಿರೆ ||4||
ಅಕ್ಕನಿಗೆ ಬಾಚಿ ಹಿಕ್ಕುವ ಸೇವೆಗೆ
ಪುಕ್ಕಟೆ ಅನ್ನಕೆ ಸಿಕ್ಕುವರೆ ನೀನು
ಚಿಕ್ಕಪ್ರಾಯಕೆನ್ನ ಪಕ್ಕಕ್ಕೆ ಬಂದರೆ
ಸಕ್ಕರೆದುಟಿಸವಿ ದಕ್ಕಿಸುವೆ
ರಕ್ಕಸ ನಿನಗೆ ದಕ್ಕುವಳೆ ನಾನು
ಮುಕ್ಕಣ್ಣನಾದರು ಲೆಕ್ಕಿಸದಾ ಪತಿ
ಗಕ್ಕನೆ ಬಂದರೆ ತಿಕ್ಕಿ ನಿನ್ನ ಕಾಯ
ದಿಕ್ಕು ದಿಕ್ಕಿಗೆ ಬಲಿಯಿಕ್ಕುವರೊ ||5||
ಭಂಡಕೀಚಕನುದ್ದಂಡತನ ಕೇಳು
ಮಂಡೆ ಹಿಕ್ಕುವಳೆಂದು ಕಂಡಕಂಡ
ಬಳಿಪುಂಡು ಮಾಡುವನು ಗಂಡಕಂಡರೆ
ತಲೆಚಂಡನಾಡುವನು ಖಂಡಿತದಿ
ಮಂಡಲಾಧಿಪನ ಹೆಂಡತಿ ನೀನಮ್ಮ
ಉಂಡಮನೆಗೆ ಹಗೆಗೊಂಡಳೆನ್ನದಿರು
ಲಂಡನಿಗೆ ಬುದ್ಧಿ ದಂಡಿಸಿ ಪೇಳದೆ
ಹಿಂಡಿಕೊಳ್ಳದಿರು ದುಂಡುಮುಖ ||6||
ತರಳ ನಿನ್ನಯ ದುರುಳತನದ
ಬೆರಳ ಸನ್ನೆಯು ಗರಳವಾಯಿತೆ
ಸರಳ ಗುರಿಗೆ ಕೊರಳ ಕೊಡದೆ
ಪುರದೊಳಿರದೆ ತೆರಳೊ
ನೀಅರಳಮೊಗ್ಗೆಯ ಹೆರಳಿಗ್ಹಾ ಕುತ
ಕುರುಳು ತಿದ್ದುವ ತರಳೆಯ ಕಂಡು
ಇರಳು ಹಗಲು ಬಾರಳು ಎನ್ನುತ
ಮರುಳುಗೊಂಡರೆ ಬರುವಳೆ ||7||
ನಿಷ್ಠೆ ಸೈರಂಧ್ರಿಯ ದೃಷ್ಟಿಸಿ ನೋಡಲು
ನಷ್ಟವಾಗುವುದು ಅಷ್ಟೈಶ್ವರ್ಯವು
ಭ್ರಷ್ಟ ನಿನಗೆ ನಾನೆಷ್ಟು ಪೇಳಲಿನ್ನು
ಕಟ್ಟಕಡೆಗೆ ನೀನು ಕೆಟ್ಟಿಕಂಡ್ಯಾ
ಸೃಷ್ಟಿಲಿ ನನ್ನಂಥ ಗಟ್ಟಿಗನ್ಯಾರಕ್ಕ
ದುಷ್ಟರ ಎದೆಯ ಮೆಟ್ಟಿ ಸೀಳುವೆನು
ಗುಟ್ಟಿಂದ ನಾರಿಯ ಕೊಟ್ಟುಕಳುಹಲು
ಪಟ್ಟದ ರಾಣಿಯೊಳಿಟ್ಟುಕೊಂಬೆ ||8||
ಕೀಚಕನಾಡಿದ ನೀಚನುಡಿ ಕೇಳಿ
ನಾಚಿ ಪತಿಯೊಳು ಸೂಚಿಸಬೇಕೆಂದು
ಯೋಚಿಸಿ ಸುಮ್ಮನೆ ಈಚೆ ಬರುತಿರೆ ನಿ
ಶಾಚರ ಕರವ ಬಾಚಿದನುಬಾಚಿ
ಹಿಕ್ಕುವಂಥ ಪ್ರಾಚೀನವೇನಿದು
ವಾಚನಾಡು ಮೀನಲೋಚನೆ ಎನ್ನಲು
ಆಚರಿಸಿ ಮುಂದುತೋಚದೆ ಖಳನ
ವಿಚಾರಿಸಿಕೊ ಶ್ರೀಚಕ್ರಪಾಣಿ ||9|
ಪೊಡವಿಪತಿಗಳ ಮಡದಿ ನಾನಾಗಿ
ಬಡತನವು ಬಂದೊಡಲಿಗಿಲ್ಲದೆ
ನಾಡದೊರೆಗಳ ಬೇಡುವುದಾಯಿತು
ಮಾಡುವುದೇನೆಂದು ನುಡಿದಳು
ಕೇಡಿಗ ಕೀಚಕ ಮಾಡಿದ ಚೇಷ್ಟೆಗೆ
ಕಡಲಶಾಯಿ ಕಾಪಾಡಿದ
ಎನ್ನನುಆಡಲಂಜಿಕೇನು ಷಡುರಸಾನ್ನದ
ಅಡುಗೆ ರುಚಿಯ ನೋಡುವರೇ ||10||
ನಡುಗುವೊ ಧ್ವನಿ ಬಿಡುತ ಕಣ್ಣೀರಿಂ-
ದಾಡುವ ಮಾತನು ಬಾಡಿದ ಮುಖವನೋ
ಡಿದನಾಕ್ಷಣ ತೊಡೆದು ನೇತ್ರವ
ಬಿಡುಬಿಡು ದುಃಖ ಮಾಡದಿರು
ಪುಡುಕಿ ನಿನ್ನನು ಹಿಡಿದವನನ್ನು
ಬಡಿದು ಯಮಗೆ ಕೊಡುವೆ ನೋಡೀಗ
ತಡವ ಮಾಡದೆ ಗಾಢದಿ ಪೋಗು
ನೀಮಾಡಿದ ಚಿಂತೆ ಕೈಗೊಡಿತೆಂದು ||11||
ಮೋಸಮಾಡಿ ಪೋದಳಾ ಶಶಿಮುಖಿ ಯೆಂ-
ದಾಸೆ ಬಿಡದೆ ತಾ ವ್ಯಸನಗೊಳ್ಳುತ
ಪೂಶರತಾಪಕ್ಕೆ ಕೇಸರಿ ಗÀಂಧವ
ದಾಸಿಯರಿಂದ ಪೂಸಿಕೊಂಡು
ಹಾಸುಮಂಚದಲ್ಲಿ ಬೀಸಿ ಕೊಳುತಲಿ
ಗಾಸಿ ಪಡುತಿರೆ ಆ ಸಮಯದಲಿ
ಲೇಸಾಗಿ ನಿನ್ನಭಿಲಾಷೆ ಸಲ್ಲಿಸುವೆ
ಈಸು ಸಂಶಯ ಬೇಡ ಭಾಷೆ ಕೊಟ್ಟೆ ||12||
ನಳಿನಮುಖಿಯು ಪೇಳಿದ ಮಾತನು
ಕೇಳಿ ಹರುಷವ ತಾಳಿದನಾಕ್ಷಣ
ಖಳನು ಹೊನ್ನಿನ ಜಾಳಿಗೆಯ
ತೊಟ್ಟಿನ್ನುಳಿಯದಲೆ ರತಿಕೇಳಿಗಿನ್ನು
ಕಾಳಗದ ಮನೆಯೊಳಗೆ ಬಾರೆಂದು
ಪೇಳಿದ ಸುಳುವು ಪೇಳಲು ಭೀಮಗೆ
ಖಳನ ಕಾಯವ ಸೀಳುವವೇಳೆ
ಬಂತೆನ್ನುತ ತೋಳ ಹೊಯಿದ||13||
ನಾರಿಯಿನ್ಯಾವಾಗ ಬರುವಳೋಯೆಂದು
ದಾರಿಯ ನೋಡುವ ಚೋರ ಕೀಚಕನು
ತೋರಿದ ಠಾವಿಲಿ ಸೇರುವ ಬೇಗನೆ
ಊರೊಳಗಾರು ಅರಿಯದಂತೆ
ಕ್ರೂರನು ಮೋಹಿಪತೆರದಿ ಎನಗೆನಾರಿಯ
ರೂಪ ಶೃಂಗರಿಸು ನೀನೆಂದು
ವಾರಿಜಮುಖಿಯ ಮೋರೆಯ ನೋಡಲು
ನೀರೆ ದ್ರೌಪದಿ ತಾ ನಾಚಿದಳು||14||
ಬಟ್ಟ ಮುಖಕೆ ತಾನಿಟ್ಟಳು ಸಾದಿನ
ಬಟ್ಟು ಫಣೆಯಲಿ ಇಟ್ಟು ಕಣ್ಣ
ಕಪ್ಪಪಟ್ಟ್ಟೆಪೀತಾಂಬರ ಉಟ್ಟುಕೋ
ನೀನೆಂದುಪುಟ್ಟಾಣಿ ಕುಪ್ಪಸ ಕೊಟ್ಟಳಾಗ
ಕಟ್ಟಾಣಿ ಮುತ್ತು ತಾಕಟ್ಟಿ ಕೊರಳಿಗೆ
ಗಟ್ಟ್ಯಾಗಿ ಚಿನ್ನದಪಟ್ಟಿಯುಡುದಾರದಿಟ್ಟನ
ಬೆರಳಿಗಿಟ್ಟಳು ಉಂಗುರ
ವಿಟಪುರುಷರ ದೃಷ್ಟಿತಾಕುವಂತೆ||15||
ಮುತ್ತಿನ ಮೂಗುತಿ ಕೆತ್ತಿದ ವಾಲೆಯು
ಇತ್ತೆರÀ ಬುಗುಡಿಯು ನೆತ್ತೀಗರಳೆಲೆ
ಚಿತ್ರದ ರಾಕಟೆ ಉತ್ತಮಕ್ಯಾದಿಗೆ
ಒತ್ತೀಲಿ ಶ್ಯಾಮಂತಿಗ್ಹ್ಹೂವು ಗೊಂಡ್ಯಾ
ಹಸ್ತದ ಕಡಗವು ಮತ್ತೆ ಚೂಡ್ಯ ವಂಕಿ
ಮುತ್ತಿನ ಹಾರವು ರತ್ನದ ಪದಕವು
ಅರ್ತಿಲಿ ನಾರಿಯು ಕುತ್ತಿಗ್ಗ್ಯೆಹಾಕಲು
ಹಸ್ತಿನಿಯೋ ಈಕೆ ಚಿತ್ತಿನಿಯೊ||16||
ಮುಡಿಗೆ ಮಲ್ಲಿಗೆ ಮುಡಿಸಿ ಸುಗಂಧ
ತೊಡೆದು ತಾಂಬೂಲ ಮಡಿಸಿಕೊಡು
ತಪ್ರೌಢನ ಸ್ತ್ರೀರೂಪ ನೋಡಲು ಖಳನು
ಕೊಡದೆ ಪ್ರಾಣವ ಬಿಡನೆಂದಳು
ಮಾಡಿದ್ಯೋಚನೆ ಕೈಗೂಡಿತು ಇಂದಿಗೆ
ನೋಡು ಆ ಕೃಷ್ಣನು ಹೂಡಿದ ಆಟವ
ಮಡದಿ ನೀನೆನ್ನ ಒಡನೆ ಬಾರೆಂದು
ನಡೆದ ಖಳನ ಬಿಡಾರಕೆ ||17||
ಇಂದುಮುಖಿ ಅರವಿಂದನಯನದ
ಮಂದಗಮನೆಯು ಬಂದಳು ಎನ್ನುತ
ನಂದನತನಯನ ಕಂದನ ಬಾಧೆಗೆ
ಕಂದಿ ಕುಂದಿ ಬಹು ನೊಂದೆನೆಂದ
ಹಿಂದಿನ ಸುಕೃತದಿಂದಲಿ ನಿನ್ನೊಳಾ-
ನಂದವಾಗಿಹುದು ಇಂದಿಗೆ ಕೂಡಿತು
ಕುಂದದಾಭರಣ ತಂದೆ ನಾ ನಿನಗೆ
ಚಂದದಿಂದಿಟ್ಟು ನೀನಂದವಾಗೆ||18||
ಗುಲ್ಲುಮಾಡದಿರೊ ಮೆಲ್ಲಗೆ ಮಾತಾಡೊ
ವಲಭರ್ತಾಕಂಡರೆ ಹಲ್ಲು ಮುರಿವರೊ
ಬಲ್ಲವ ನಿನಗೆ ಸಲ್ಲದು ಈ ಕಾರ್ಯ
ಗೆಲ್ಲಲರಿಯೆ ನೀ ಕೊಲ್ಲಿಸಿಕೊಂಬೆ
ಚೆಲ್ವೆ ಕೇಳು ನಿನ್ನ ಹುಲ್ಲೆಗಣ್ಣ ನೋಟ
ಕೊಲ್ವಬಗೆ ಗೆಲ್ಲಲಾರೆನೆಂದು
ಗಲ್ಲವ ಮುದ್ದಿಟ್ಟು ಮೈಯೆಲ್ಲ ಹುಡುಕಲು
ಕಲ್ಲೆದೆಯಲ್ಲ್ಲಿರೆ ಖೂಳ ನೊಂದ ||19||
ನಾರಿಯೊ ನೀನೇನು ಮಾರಿಯೊ ಇನ್ನೊಂದು
ಬಾರಿ ನೀ ಎನಗೆ ಮೋರೆ ತೋರಿಸೆಂದ
ಧೀರನ ಸಮೀಪಬಾರದೆ ಓಡುವ
ದಾರಿಯ ನೋಡುತಿರಲಾಗ
ಬಾರದಂಥಾ ಪರದಾರರ ಮೋಹಿಪ
ಕ್ರೂರಗೆ ಈ ರೂಪ ಘೋರವಾಗಿಹುದು
ಸಾರದ ಮಾತಿದು ಯಾರಾದರೇನೀಗ
ಮಾರನ ತಾಪವ ಪರಿಹರಿಸುವೆ ||20||
ಶುದ್ಧಹೆಣ್ಣೆಂದು ಪ್ರಸಿದ್ಧವಾಗಿಹ ಎನ್ನ
ವಿದ್ಯವ ನಿನಗೆ ಸದ್ಯಕ್ಕೆ ತೋರುವೆ
ನಿದ್ರೆಯಗೆಡುವೊ ಬುದ್ಧಿಯು ನಿನ್ನದು
ಸದ್ದು ಮಾಡದೆ ಬಂದು ಮುದ್ದಿಸೆನ್ನ
ಬದ್ಧವೊ ಏನೆಂದು ಬದ್ದಿಗೆ ಹೋಗಲು
ಎದ್ದು ಸಮೀರಜ ಗುದ್ದಲು
ಕೀಚಕಬಿದ್ದನು ಭೂಮಿಲಿ ಗೆದ್ದೆನೆನುತ
ಅನಿ-ರುದ್ಧನ ಸ್ಮರಿಸುತಲೆದ್ದ ಭೀಮ ||21||
ಕೆಟ್ಟ ಕೀಚಕ ತಾ ತೊಟ್ಟ ಛಲದಿಂದ
ಬೆಟ್ಟದಂಥ ದೇಹ ಬಿಟ್ಟಿನ್ನವನ
ಪಟ್ಟಾಗಿ ತೋರುವೆ ದೃಷ್ಟಿಸು ಎನ್ನಲು
ಭ್ರಷ್ಟನ ನೋಡುವುದೇನೆಂದಳು
ಕೊಟ್ಟ ಭಾಷೆಯು ಈಗ ಮುಟ್ಟಿತು ನಿನಗೆ
ಕೃಷ್ಣನ ದಯದಿ ಕಷ್ಟವು ಹಿಂಗಿತು
ಪಟ್ಟಣಕೀಸುದ್ದಿ ಮುಟ್ಟದ ಮುಂಚೆ
ಗುಟ್ಟಲಿ ಪೋಗುವ ಥಟ್ಟನೆಂದ ||22||
ಅರಸಿ ನಿನ್ನೊಳು ಸರಸ ಬೇಕೆಂದ
ಪುರುಷನ ಜೀವ ಒರೆಸಿ ಕೊಂದೆನು
ಹರುಷದೀ ಪುರದರಸು ನಮ್ಮನು
ಇರಿಸಿಕೊಂಡೊಂದೊರುಷವಾಯಿತು
ಬೆರೆಸಿದ ಸ್ನೇಹಕ್ಕೆ ವಿರಸ ಬಂತೆಂದು
ಸರಸಿಜಾಕ್ಷಿಯು ಕರೆಸಿ ನಿನ್ನೊಳ
ಗಿರಿಸದಿದ್ದರೆ ಹಯವದನನಸ್ಮರಿಸಿ
ಗದೆಯನು ಧರಿಸುವೆ||23||