ಶ್ರೀವಾದೀಂದ್ರತೀರ್ಥರು
ವಂದಾರುಜನಸಂದೋಹಮಂದಾರತರುಸನ್ನಿಭಂ |
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಂ ||
Period : 1728 – 1750
Ashrama Gurugalu : Sri Upendra Teertharu
Ashrama Shishyaru : Sri Vasudendra Teertharu
Aradhana Tithi : Jyesta Shuddha Navamee (June)
Vrindavana Situated at : Mantralayam
River : Tungabhadra
ಪೂರ್ವಾಶ್ರಮನಾಮ | ಶ್ರೀನಿವಾಸಾಚಾರ್ಯರು |
ಸನ್ಯಾಸ ಸ್ವೀಕಾರ | 1728 |
ಗುರುಗಳು | ಶ್ರೀಉಪೇಂದ್ರತೀರ್ಥರು |
ಪೀಠ ಆಳಿದ ಅವಧಿ | 22 ವರ್ಷಗಳು |
ಬೃಂದಾವನ ಪ್ರವೇಶ | 1750 ಜ್ಯೇಷ್ಠ ಶುದ್ಧ ನವಮಿ |
ಬೃಂದಾವ ಸ್ಥಳ | ಮಂತ್ರಾಲಯ |
ಉತ್ತರಾಧಿಕಾರಿ | ಶ್ರೀವಸುಧೇಂದ್ರತೀರ್ಥರು |
ನದಿ | ತುಂಗಭದ್ರಾ |
ಜಿಲ್ಲೆ | ಕರ್ನೂಲ್ |
ರಾಜ್ಯ | ಆಂಧ್ರಪ್ರದೇಶ |
ಗ್ರಂಥಗಳು | ತತ್ವಪ್ರಕಾಶಿಕಾ ಟಿಪ್ಪಣಿ (ಮೀಮಾಂಸಾ ನಯದರ್ಪಣ), ತತ್ತ್ವೋದ್ಯೋತ ಟಿಪ್ಪಣಿ, ಭೂಗೋಳ ಖಗೋಳ ವಿಚಾರ, ಶ್ರೀರಾಘವೇಂದ್ರಸ್ವಾಮಿ ಮಠಗತಾರ್ಚಾಗತಿಕ್ರಮ, ಗುರುಗುಣಸ್ತವನ, ನವ್ಯದುರುಕ್ತಿಶಿಕ್ಷಾ(ಪೂರ್ವಾಶ್ರಮದಲ್ಲಿ ರಚಿಸಿದ್ದು) |
ವಂದಾರುಜನಸಂದೋಹಮಂದಾರತರುಸನ್ನಿಭಂ |
ವೃಂದಾರಕಗುರುಪ್ರಖ್ಯಂ ವಂದೇ ವಾದೀಂದ್ರದೇಶಿಕಂ ||
Sanskrit
वंदारुजनसंदोहमंदारतरुसन्निभं |
वृंदारकगुरुप्रख्यं वंदे वादींद्रदेशिकं ||
Telugu
వందారుజనసందోహమందారతరుసన్నిభం |
వృందారకగురుప్రఖ్యం వందే వాదీంద్రదేశికం ||
Tamil
வம்தாருஜநஸம்தோஹமம்தாரதருஸந்நிபம் |
வ்ரும்தாரககுருப்ரக்யம் வம்தே வாதீம்த்ரதேஶிகம் ||
vaMdArujanasaMdOhamaMdAratarusanniBaM |
vRuMdArakagurupraKyaM vaMdE vAdIMdradESikaM ||
ಶ್ರೀವಾದೀಂದ್ರರು ಶ್ರೀರಾಯರ ಪೂರ್ವಾಶ್ರಮದ ಮರಿಮಕ್ಕಳು. ಶ್ರೀಉಪೇಂದ್ರತೀರ್ಥರಿಂದ ಸನ್ಯಾಸಾಶ್ರಮವನ್ನು ಸ್ವೀಕರಿಸಿ ಸುಮಾರು 22 ವರ್ಷಗಳ ಕಾಲ ಶ್ರೀರಾಯರ ಮಠದ ಪೀಠಾಧಿಪತಿಗಳಾಗಿದ್ದರು. ಅವರು ಪೀಠಕ್ಕೆ ಬಂದಾಗ ದಕ್ಷಿಣ ಭಾರತದಲ್ಲಿ ರಾಜಕೀಯ ಪರಿಸ್ಥಿತಿ ಸರಿಯಾಗಿರಲಿಲ್ಲ. ಶ್ರೀಮಠದ ಆಸ್ತಿಯನ್ನು ರಕ್ಷಿಸಲು ಅವರು ಸಾಕಷ್ಟು ಶ್ರಮವಹಿಸಬೇಕಾಯಿತು. ಮಂತ್ರಾಲಯವನ್ನು ರಕ್ಷಿಸಲು ಆದವಾನಿ ಅಧಿಕಾರಿ ಮಝಫರ್ ಜಂಗ್ ನೊಡನೆ ಮಾತನಾಡಿ ಆ ಸ್ಥಳದ ಸನ್ನದನ್ನು ಮಾಡಿಸಿಕೊಂಡರು.
ಶ್ರೀವಾದೀಂದ್ರತೀರ್ಥರು ವೇದಶಾಸ್ತ್ರಗಳಲ್ಲಿ ಅಪ್ರತಿಮ ಪಾಂಡಿತ್ಯವನ್ನು ಹೊಂದಿದ್ದರು. ತತ್ವಪ್ರಕಾಶಿಕಾ ಹಾಗೂ ತತ್ವೋದ್ಯೋತ ಗ್ರಂಥಗಳಿಗೆ ಟಿಪ್ಪಣಿಯನ್ನು ರಚಿಸಿದ್ದಾರೆ. ‘ಭೂಗೋಳ ಖಗೋಳ ವಿಚಾರ’ ಎಂಬುದು ಅವರು ರಚಿಸಿದ ವಿಶಿಷ್ಟವಾದ ಕೃತಿ. ‘ಗುರುಗುಣಸ್ತವನ’ ವಾದೀಂದ್ರರ ಅಪ್ರತಿಮ ಕೃತಿ. ಶ್ರೀಹರಿಯಿಂದ ಆರಂಭಿಸಿ ಶ್ರೀಮಧ್ವಾಚಾರ್ಯರಿಂದ ಶ್ರೀರಾಘವೇಂದ್ರ ಗುರುಸಾರ್ವಭೌಮರವರೆಗಿನ ಎಲ್ಲ ಗುರುಗಳ ಸ್ತೋತ್ರ ಈ ಕೃತಿಯಲ್ಲಿ ಮಾಡಿದ್ದಾರೆ. ಅದ್ಭುತವಾದ ರಚನೆ.
ಶ್ರೀಗಳವರು ಕ್ರಿ.ಶ 1750 ಜ್ಯೇಷ್ಠ ಶುದ್ಧ ನವಮಿಯಂದು ಮಂತ್ರಾಲಯದಲ್ಲಿ ವೃಂದಾವನಸ್ಥರಾದರು.
ಶ್ರೀವಾದೀಂದ್ರರ ಆರಾಧನೆ ನಿಮಿತ್ತ ಅವರ ಮಹಿಮೆಯನ್ನು ಕೊಂಡಾಡಿ ಶ್ರೀವಿಜಯದಾಸರು ಹಾಗೂ ಶ್ರೀಗೋಪಾಲದಾಸರು ರಚಿಸಿದ ಎರಡು ಪದಗಳು ಹೀಗಿವೆ.
ಕಂಡೆ ಕಂಡೆನೋ ಕಂಗಳಲಿ ಭೂ-
ಮಂಡಲದೊಳು ಮೆರೆವ ಯತಿಗಳ
ಮಂಡಲಾಬ್ಧಿಗೆ ಸೋಮನೆನಿಪ ಅ-
ಖಂಡ ಮಹಿಮ ವಾದೀಂದ್ರ ಗುರುಗಳ
ನಸುನಗೆಯ ಮೊಗ ಪಸರಿಸಿದ ದ್ವಾ-
ದಶನಾಮಗಳು ಶ್ರೀಮುದ್ರೆ ಮುದದಿಂದ
ನೊಸಲಿಗೊಪ್ಪುವ ಗಂಧ ಅಕ್ಷತೆ
ಎಸೆವ ಸಣ್ಣಂಗಾರ ಕಿವಿಯಲಿ
ಹಸನಾದ ಎಳೆ ತುಳಸಿ ಶೋಭಿಸೆ
ಬೆಸೆಸುವ ಒಂದೊಂದು ಮಾತಾ –
ಲಿಸಿದರದು ವೇದಾರ್ಥ ತುಲ್ಯಾ –
ಲಸವಗೈಸದೆ ಬರುವ ಗುರುಗಳ
ಮೊಸಳಿವಾಯ ಪಲ್ಲಕ್ಕಿ ಸುತ್ತು ಬಾ
ರಿಸುವ ನಾನಾ ವಾದ್ಯದಾ ಘೋಷ
ಪುಸಿಕರೆದೆದಲ್ಲಣರು ಎಂಬಾ
ದಶದಿಕ್ಕಿನೊಳು ಕೀರ್ತಿ ತುಂಬಿರೆ
ಶಿಶುವ ಮೊದಲಾದವರು ತಮತಮ
ಬೆಸನ ಪೇಳಲು ಕೇಳಿ ಅವರ –
ಬ್ಬಸವ ಕಳೆದಿಷ್ಟಾರ್ಥ ತೋರುವ
ಋಷಿಕುಲೋತ್ತಮರಾದ ಗುರುಗಳ
ಶ್ವಸನಮತ ವಾರಿಧಿಗೆ ಪೂರ್ಣ
ಶಶಿ ಎಂದೆನಿಸಿಕೊಂಬ ಧೀರುದಾರರ
ಅಸಮ ತತ್ವಪ್ರಮೇಯದಲಿ ನಿರ್ಮಿಸಿದನೆ ಲೋ –
ಕೇಶ ಇವರನ್ನ ವಸುಧಿ ಅಮರರು
ವ್ರಸರ ಎಡಬಲ ಎಸೆದು ತು-
ತಿಸಲು ಹಿಗ್ಗಿ ಕರುಣಾ –
ರಸಭರಿತರಾಗಿ ನೋಡುತ್ತ ಮಾ –
ನಸದಿ ಹರಿಪದ ಭಜಿಪ ಗುರುಗಳ ||
ಕುಸುಮಶರನ ಬಾಣವನು ಖಂಡ್ರಿಸಿ
ಬಿಸುಟ ಸಂಪನ್ನ ವಿದ್ಯಾ
ವಸುವಿನಲಿ ಆವಾಗ ತಲೆ ತೂ –
ಗಿಸುವರು ಪಂಡಿತರ ಮೆಚ್ಚಿಸಿ
ವಶವೆ ಪೊಗಳಲು ಎನಗೆ ಇವರ ದ-
ರುಶನದಿಂದಲಿ ಗತಿಗೆ ವಧ ನಿ –
ಮಿಷದೊಳಗೆ ಇದು ಸಿದ್ಧವೆಂದು ವಂ-
ದಿಸಿರೊ ಮರೆಯದೆ ಈ ಗುರುಗಳಾ ||
ಮಿಸುಣಿವ ಮಂಟಪದೊಳಗೆ ರಂ-
ಜಿಸುವ ರಾಮನ ಕುಳ್ಳಿರಿಸಿ ಅ –
ರ್ಚಿಸುವ ಚಿತ್ತೇಕತಾಗ್ರದಲಿ ವೊ-
ಲಿಸುವ ತಂತ್ರಸಾರೋಕ್ತ ಬಗೆಯನು
ಕುಶಲರಾದ ಉಪೇಂದ್ರ ಮುನಿಕರ
ಬಿಸಜದಿಂದಲಿ ಜನಿಸಿ ಭಕುತಿಲಿ
ಅಸುರರಿಪು ನೆರಿ ವಿಜಯವಿಠ್ಠಲನ
ಹೆಸರುಗಳ ಎಣಿಸುವ ಗುರುಗಳ ||
**********************************************
ಎಣೆಯಾರೋ ನಿಮಗೆ ಕುಂಭಿಣಿಯ ಮಧ್ಯದ –
ಲಿನ್ನು ಮನಸಿಜ ಆರಂಭಿಸಿ ಮನು, ಮುನಿಕುಲ
ಚಿಂತಾಮಣಿಯೆ, ವಾದೀಂದ್ರ ಮರುತಮತ
ವನಧಿ ಚಂದ್ರ ಕುಮತಗಜಗಣಕೆ, ಮೃಗೇಂದ್ರ
ಸ್ನಾನಾನುಷ್ಠಾನ ಕಾಲದಲ್ಲಿ, ಶ್ರೀರಂಗ
ಪಾಣಿಯ ನ್ಯಾಸ, ಧ್ಯಾನ ಮಾಡುವ, ಧೀರ
ದಾನಾದಿ ಕರ್ಮ, ಶಮೆ, ದಮೆ, ನಾನಾ
ಗುಣಾರ್ಣ, ಭಜಿಸುವಂಥ ಧೀರ ಪ್ರಸನ್ನ
ಹರಿಯೇ ಸರ್ವೋತ್ತಮ, ಮರುತ ದೇವನೆ
ಗುರು, ಎರಡು ಮೂರು ಭೇದ ಸ್ಥಿರವೆಂದು ಸ್ಥಾಪಿಸಿ
ಧರೆಯೊಳು ಮೆರೆದೆ ವಾದಿಗಳುಕ್ತಿ ಧುರದಿಂದ
ತರಿದೆ, ನಂಬಿದವರ ಕರುಣದಿ ಪೊರೆದೆ
ವೇದಾರ್ಥಗಳನೆಲ್ಲ ವ್ಯಾಖ್ಯಾನ ಮುಖದಿಂದ
ಸಾಧಿಸಿ ಧರೆಗೆಲ್ಲ ಬೋಧಿಸಿ ಅವರಘ
ಭೇದವ ತರಿದೆ ಮನೋಭೀಷ್ಟ ಮೋ-
ದದಿ ಗರೆದೆ, ರಾಮನಾಮ ಸ್ವಾದ ಸವಿದೆ
ದರಹಾಸ ಸರಿತೆತೀರ ಮಂತ್ರಾಲಯದಲ್ಲಿ
ಗುರುರಾಯ ಆಜ್ಞೆಯಿಂದವರ ಸನ್ನಿಧಿಯಲ್ಲಿ
ಸ್ಥಿರವಾಗಿ ನಿಂದೆ ಸುಮಹಿಮೆಯಲಿ
ಮೆರೆವೆ ನೀ ಮುಂದೆ ದಯದಲೆನ್ನ ಪೊರೆಯಯ್ಯ ತಂದೆ
ಮರುತಾಂತರ್ಗತ ಗೋಪಾಲವಿಠ್ಠಲನ್ನ
ಹರುಷದಿ ಪೂಜಿಪ ಗುರು ಉಪೇಂದ್ರ –
ತೀರ್ಥರ ಕರಕಂಜಜಾತ ಭಕ್ತರ ಕಾಮ, ವರ
ವಾರಿಜಾತ ಕಾಮಧೇನು ಕರುಣಿಸೋ ದಾತ ||
Sri Vadeendratheertha
Purushottamacharya was the son of Laksminarayanacharya, the poorvashrama son of Sri Gururaja. His son was Srinivasacharya. In keeping with the reputation of his family, he had acquired great scholarship and was conducting classes in the Mutt. Recognising his scholarship and loyalty to the Mutt, Upendratheertha decided that he only was deserving and named him Vadeendratheertha after bestowing sanyasa.
By then political turmoil had raised its ugly head in South India. If today one tiny ruler rose to power, tomorrow a new such ruler would conquer him. In the chaos that prevailed, it became an uphill task for religious institutions to enjoy the perpetual possession of the villages gifted by the rulers of yesteryears. If one Palegar was helpful to the possession, another would dispossess. Under the circumstances religious heads had to undertake different tours to protect through their personal influence. Instead of royal patronage forthcoming, anarchy that became the trend played havoc. It had become extremely difficult to defend the honour of the Mutt and pursue the routine of performing poojas and conducting classes in the face of such adversities. Despite these oddities, the heads of the Mutt did well to defend and nurture their tradition in the best way possible. From this point of time onwards, what becomes more and more evident in the documents of the Mutt is getting fresh gifts of lands and villages in addition to recovering those that the Mutt enjoyed for long earlier.
When the swamiji began his tour in Tamilnadu, the officer in charge of the administration of a small province there honoured him. Some selfish and greedy people there eyeing the most priceless and gem-studded idol of Vaikunthavasudeva and Kalpavruksha stole the valuables of the Mutt at night. But owing to the shrewedness of the officials of the Mutt, they were not fully successful. Still those culprits made away with Kalpavruksha. The swamiji set off on his journey with the idols of the Mutt and other valuables in his safe custody.
Earlier Sri Gururaja leaving Tamilnadu had settled down at Mantralaya bordering North Karnataka. Afterwards Yogeendratheertha again proceeded towards Tamilnadu. The Samsthana that was there since then again proceeded towards north during Vadeendratheertha’s period. But the threat of dacoity, troubles and turmoils which were rampant in Tamilnadu were repulsive. Further some lands and properties of the Mutt at North Karnataka were on the verge of wriggling out of Mutt’s control. Therefore the swamiji came to the surroundings of Ranebennur passing through the state of Mysore. Some affluent Desais and Deshpandes of that region had still remained theists. Influenced by the majesty of the swamiji, they offered him their deep reverence. The Nawab of Savanur gifted to the Mutt some lands at Rettehalli. Nadagouda, the Desai of Havanur gifted estates at village Moraba. Thus making the Mutt richer with new gifts of properties, the swamiji came to Hubli region. The village Kireetagiri which had been gifted to Sri Gururaja had missed the control of the Mutt. Jayavantabhai Venkatappayya Bahadur Desai Paragane again gifted that village to the swamiji in 1734 and had the documents in the name of the Mutt.
Thus the swamiji touring places reached Mantralaya. The Mutt was facing the danger of losing control over even Mantralaya. Then the swamiji again had a discussion in this regard with Muzaffarjung Bahadur, the administrator of Adoni and had the documents in respect of the village reconveyed in favour of the Mutt. The Brindavan which Venkannapant had hastened to ready for Sri Gururaja in the past had remained now as it is which was ordained by Sri Gururaja to be so. None but the superbly cognitive Gururaja knew when a suitable heir to this Brindavan would arrive. Now it appears that the time has come. The swamiji without being disposed to going towards Tamilnadu again stayed on at Mantralaya and reached his heavenly abode on the ninth day of Jyestha Shuddha in Pramodini Samvatsara of 1750 in the sacred place of Sri Gururaja. The Brindavan which was readied for Sri Gururaja in the past was dedicated to Vadeendratheertha. His Brindavan was installed on the left side and very near to Sri Gururaja’s Brindavan.
The very thing that his Brindavan could be located near Sri Gururaja’s Brindavan speaks volumes for Vadeendra’s greatness. It has already been described how the Brindavan of Sri Gururaja waved in approval of it when Sri Vadeendratheertha submitted Gurugunastavana, his magnum opus to Sri Gururaja. This itself demonstrates how great was Sri Gururaja’s blessings on him. As was Sumatheendratheertha, a minister to Gururaja in respect of literary work, Jagannathadasa in respect of the world of Haridasa literature, so was Vadeendratheertha a minister to Sri Gururaja in respect of miracles in the Brindavan. Even today Vadeendra appears along with Gururaja and graces the devotees in their dreams.
Of the several books written by Sri Vadeendra, the following are the books available.
- Tattvaprakashika Tippani (Meemamsa Nayadarpana)
- Tattvodyota Tippani
- Bhoogola Khagola Vichara
- Raghavendramathagatharchagathikrama
- Gurugunastavana
- Navyadurakthishiksha (written in poorvashrama)
Vadeendratheertha has done yeoman service to Haridasa literature with many compositions in Kannada too. Amongst them, a few Devaranamas are available now.
Source : Gurucharite