Sri Abhinava Praneshavittala Dasaru
- Period : 1903 – 1978
- Name : Sri Hanumantarayaru
- Ankitha : Abhinava Pranesha Vittala
- Upadesha Guru : Sri Pranesha Dasaru(in Dream)
- Aradhana Tithi : Pushya Bahula Sapthamee
- Place : Lingasuguru
ಶ್ರೀ ಅಭಿನವ ಪ್ರಾಣೇಶದಾಸರು
ಕಾಲ | ಕ್ರಿ. ಶ. 1903 – 1978 |
ಹೆಸರು | ಶ್ರೀಹನುಮಂತರಾಯರು |
ತಂದೆ | ಶ್ರೀರಾಘಪ್ಪನವರು |
ತಾತ | ಶ್ರೀಗುರು ಪ್ರಾಣೇಶದಾಸರು |
ಮುತ್ತಾತ | ಶ್ರೀಮರುದಾಂಶ ಶ್ರೀ ಪ್ರಾಣೇಶದಾಸರು |
ಪುಣ್ಯ ತಿಥಿ | ಪುಷ್ಯ ಬಹುಳ ಸಪ್ತಮೀ |
ಅಂಕಿತ | ಅಭಿನವ ಪ್ರಾಣೇಶವಿಠ್ಠಲ |
ಉಪದೇಶ ಗುರುಗಳು | ಶ್ರೀಪ್ರಾಣೇಶದಾಸರಿಂದ ಸ್ವಪ್ನ ಲಬ್ಧ |
ಉದ್ಧಾರಕ ಗುರುಗಳು | ಶ್ರೀವರದೇಂದ್ರತೀರ್ಥರು |
ಸ್ಥಳ | ಲಿಂಗಸೂಗೂರು |
ಸಮಕಾಲೀನ ಯತಿಗಳು :ಶ್ರೀಸುಶೀಲೆಂದ್ರತೀರ್ಥರು, ಶ್ರೀಸುವ್ರತೀಂದ್ರತೀರ್ಥರು, ಶ್ರೀಸುಯಮೀಂದ್ರತೀರ್ಥರು, ಶ್ರೀಸುಜಯೀಂದ್ರತೀರ್ಥರು,ಶ್ರೀವಿದ್ಯಾಪ್ರಸನ್ನತೀರ್ಥರು, ಶ್ರೀವಿದ್ಯಾಪಯೋನಿಧಿತೀರ್ಥರು
ಹರಿದಾಸರು :ಶ್ರೀ ಇಂದಿರೇಶ ( ಶ್ರೀ ಪಾಂಡುರಂಗಿ ಹುಚ್ಚಾಚಾರ್ಯ ), ಶ್ರೀ ಶ್ಯಾಮಸುಂದರದಾಸರು, ಶ್ರೀ ಐಕೂರು ಆಚಾರ್ಯರು, ಶ್ರೀ ಕಾರ್ಪರ ನರಹರಿ, ಶ್ರೀ ಬಡೇ ಸಾಹೇಬರು, ಶ್ರೀ ಸುಳಾದಿ ಕುಪ್ಪೆರಾಯರು
ವರದೇಂದ್ರಾರ್ಚಕಂ ಶಾಂತಂ – ಪ್ರಾಣೇಶಾರ್ಯಸುವಂಶಜಂ |
ಮಾಲೋಲ ಪದ ಸಂಸಕ್ತಂ – ಹನುಮಂತಾಭಿಧಂ ಭಜೇ ||
वरदेंद्रार्चकं शांतं – प्राणेशार्यसुवंशजं ।
मालोल पद संसक्तं – हनुमंताभिधं भजे ॥
varadeMdrArcakaM SAMtaM – prANeSAryasuvaMSajaM |
mAlola pada saMsaktaM – hanumaMtABidhaM Baje ||
ದಾಸರಾಯರ ರಚನೆಯ ಕೆಲವು ಆಯ್ದ ಭಾಗಗಳು
” ಶ್ರೀ ರಾಯರ ಮೇಲಿನ ಸ್ತೋತ್ರ ಸುಳಾದಿ ” :
ಗುರು ರಾಘವೇಂದ್ರ ಪರಮ ಮಂಗಳ ಮೋದ ।
ಚರಿತೆ ಬರೆವೆ ಗುರು ವರದೇಂದ್ರ ರಾಯರ ।
ಕರುಣದಿಂದಾ ಪನಿತು ಹರುಷದಿಂದ ।
ಪರಮೇಷ್ಠಿ ಚರಣಾಬ್ಜ ಮಧುಕರ ಶಂಖುಕರ್ಣ ।
ಶರಜಜನಾಜ್ಞದಿ ವರ ಕೃತ ಯುಗದಲ್ಲಿ ।
ಪುರಟನಯ್ಯನ ಸುತನಾಗಿ ಜನಿಸೀ ।
ಹರಿ ಭಕ್ತಾಗ್ರಣಿಯೆನಿಸಿ ಹರಿಭಕ್ತಿ ಸುಧೆ ಸುರಿಸಿ ।
ಹಿರಿಯನ ಛಲದಿಂದ ವರ ಸಭೆ ಸ್ತಂಭದಿ ।
ನರಹರಿಯನು ತೋರ್ದ ಪ್ರಹ್ಲಾದನೆ ।।
ಎರಡೊಂದು ಯುಗದಲ್ಲಿ ಕುರಕುಲ ಸಂಜಾತ ।
ಮುರಹರ ಸೇವಕ ಬಾಹ್ಲೀಕ ।।
ಖರ ಯುಗದಲ್ಲಿ ಪ್ರಥಮ ಬನ್ನೂರುರಾಯರ ಪುತ್ರ ।
ಸ್ವರ್ಣವರ್ಣರ ಛಾತ್ರ ವ್ಯಾಸತೀರ್ಥ ।
ಕರಿನಾಡಿನಲ್ಲಿ ಅವತರಿಸಿದ ಪುನರಪಿ ।
ಧರಿಜಪತಿಯ ಚರಣಾರ್ಚನೆ ಗೈಯ್ಯಲು ।
ನರಹರಿ ಅಭಿನವ ಪ್ರಾಣೇಶ ವಿಠ್ಠಲನ ।
ಚರಣ ಕಿಂಕರ ಚಂದ್ರ ಗುರುರಾಘವೇಂದ್ರ ।।
” ಶ್ರೀ ವರದೇಂದ್ರತೀರ್ಥ ಸ್ತೋತ್ರ ಸುಳಾದಿ ” :
ವಂದಿಸುವೆನು ಭವ ಮಂದಧಿ ತಾರಕ ।
ಸಿಂಧು ಶಯನ ರಾಮಚಂದ್ರಾರ್ಚಕ । ವಸು ।
ಧೇಂದ್ರರಾಯರ ಕರಮಂದಜೋದ್ಭವ । ವರ ।
ದೇಂದ್ರರಾಯನೆ ಮತಿ ಚಂದಿರನೆ ।।
ಇನ್ನೊಂದು ಸುಳಾದಿಯಲ್ಲಿ..
ದುರಿತ ಕದಳಿ ವನ ದ್ವಿರದಿಯಂತಿಪ್ಪನು ।
ಪರಮತ ಶರನಿಧಿ ಕರಿರಾಜನೆನಿಸುವ ।
ಮರುತಮತಾಂಬುಧಿ ಪರಿಪೂರ್ಣ ಹಿಮಕರ ।
ಧರಣಿ ದೇವರ ಸೇವೆ ಹರುಷದಿ ಕೊಳ್ಳುತವರು ।।
ದ್ಧರಿಸುವ ಕರುಣಾಳು ಗುರುರಾಜ ಪವಿತೇಜ ।
ಸುರರಾಜನಂತೆ ಭೂಸುರ ಗಢನದಿ ಮೆರೆವ ।
ಕರಿಚರ್ಮಾಂಬರ ಪ್ರೀತ ವರದೇಂದ್ರನೇ ।।
” ಶ್ರೀ ಗೋಪಾಲದಾಸರ ಸ್ತೋತ್ರ ಸುಳಾದಿ ” :
ಹರಿದಾಸ ಚತುಷ್ಟಯರೊಳಗೋರ್ವ ಮಹಿಮರ ।
ತರುಪಾಲದಾಸ ಚರಿತೆಯ ತಿಳಿದಷ್ಟು ।
ಬರೆಯುವೆ ಶ್ರೀ ಹರಿ ಗುರುಗಳ ಕರುಣದಿ ।
ಸಿರಿವರನಾಜ್ಞದಿ ಕರಿಕಂಠ ಧರೆಯೊಳು ।
ವರ ಭಾಗವತ ಧರ್ಮ ಪಸರಿಸ ಲೋಸಗ ।।
ಮುರಹರಿಯುದರದಿ ದಧಿಶಿಲೆಯೋಳು ಪುಟ್ಟಿ ।
ಪೆರೆ ಶುಕ್ಲನಂದದಿ ವರ್ಧಿಸಿದ ।
ಉರಿಯುದರದಿ ಭಾಗದಿಗಳೆಲ್ಲ ಸ್ವತ್ತಪ ।
ಹಸಿರುದೊಡಲು ಬಂದು ಸಂಕಾಪುರದಿ ।
ಮರುತದೇವನ ಆಶ್ರಯವನ್ನು ಪಡೆದರು ।
ಹರಿಯಭಿನವ ಪ್ರಾಣೇಶವಿಠ್ಠಲನ ದಯದಿ ।।
Sri Parvathi devi sthothra sulaadhi
ಧೃವತಾಳ
ಉಮಾ ಕಾತ್ಯಾಯಿನಿ ಪಾವ೯ತಿ ಕಲ್ಯಾಣಿ|
ಬೊಮ್ಮ ಭೃಕುಟಿ ಸಂಭೂತ ದೇವನ ರಾಣಿ |
ಕಮ್ಮಗೋಲನ ಜನನಿ ದಾಕ್ಷಾಯಿಣಿ |
ಸುಮನಸರಿಗೆ ಗತಿ ಕರುಣಾಪೂರಿತ ಪಾಂಗೆ|
ಕುಮನಸರಿಗತಿ ವಜ್ರ ಕಠಿಣ ಪಾಂಗೆ |
ರಮೆಯರಸನ ಪಾದಸುಮನಸ್ವ ಭೃಂಗೆ |
ಬೊಮ್ಮಭಿನವ ಪ್ರಾಣೇಶ ವಿಠಲನ |
ಸುಮನ ಚರಣಗಳಲ್ಲಿ ಮನವ ಪ್ರೇರಿಸು ತಾಯೆ
ಮಟ್ಟತಾಳ
ಚಂಡಿದುರ್ಗೆ ಭೂತಗಣ ಸಂಸೇವಿತಳೆ |
ರುಂಡಾಹಿ ಮಾಲಾಧರ ಹೃನ್ಮಂದಿರಳೆ |
ಉಂಡು ವಿಷವ ನಿನ್ನ ಗಂಡನು ಬಳಲಿ |
ಕೈಕೊಂಡೌಷಧವೆನಗೆ ಕರುಣದಿ ನೀಡಮ್ಮ ಮಂಡೆ ಬಾಗಿ ಬೇಡ್ವೆ |
ಕರಗಳ ಜೋಡಿಸುತ | ಪುಂಡರೀಕ ನಯನೆ ಪುಂಡರೀಕ ಗಮನೆ |
ಪಂಢರ ಅಭಿನವ ಪ್ರಾಣೇಶ ವಿಠಲನ |
ಪುಂಡರೀಕ ಚರಣ ಬಂಡುಣಿ ಎನಿಸಮ್ಮಾ||
ತ್ರಿವಿಡಿತಾಳ
ಆರುಮೊಗನ ಪೆತ್ತ ಚಾರು ಚರಿತ್ರಳೆ |
ವಾರಣಾರಿ ವೃಷಭಶ್ಯಂದನಳೆ |
ಶ್ರೀ ರಜಪತಿ ರಾಮನಾಮ ಮಂತ್ರವ ಜಪಿಸಿ |
ಸರ್ವಮಂಗಳೆಯಾದ ಶರ್ವಾಣಿಯೆ ನಾರಿಯರಾಭಿಷ್ಟ ಪೂರೈಸುತವರಿಗೆ |
ವೀರ ಪತಿವ್ರತೆ ಧರ್ಮ ಮರ್ಮವ ತೋರ್ದ| ವಾರಿಜನಯನೆ ಮಂಗಳಗೌರಿಯೇ |
ಮಾರಮಣಭಿನವ ಪ್ರಾಣೇಶ ವಿಠಲನ |
ಚಾರು ಚರಣಗಳಲ್ಲಿ ಮನವ ಪ್ರೇರಿಸು ತಾಯಿ
ಅಟ್ಟತಾಳ
ಹರಿ ಸರ್ವೋತ್ತಮನೆಂಬ ಸ್ಥಿರವಾದ ಜ್ಞಾನವ |
ಕರುಣಿಸು ಕರುಣಿಸು ಶೆರಗೊಡ್ಡಿ ಬೇಡುವೆ |
ದುರುಳ ದಾನವರಂತೆ ಪರಮೇಶ ಶಿವನೆಂದು ಪೆರಧರ ಪರನೆಂದು ನುಡಿಸದಿರೆಂದೆಂದು |
ಸಿರಿಯರಸನ ಪೆದ್ದ ಪರಿಚರ್ಯವನು ಕೊಡು |
ಮರುಳೊಂದು ಬಯಸೇನು ಖೇಶ ಷಣ್ಮುಖಮಾತೆ |
ಸಿರಿವರ ಅಭಿನವ ಪ್ರಾಣೇಶ ವಿಠಲನ |
ಚರಣ ವಾರಿಜ ಭೃಂಗೆ ಸರ್ವಭಕ್ತಾಂತರಂಗೆ ||
ಆದಿತಾಳ
ಭಾಸುರ ಚರಿತಳೆ ಭೂಸುರ ವಿನುತಳೆ |
ಸಾಸಿರ ನಾಮನ ತೋಷದಿ ಭಜಿಪಳೆ |
ವಾಸವಾದಿ ದಿವಿಜೇಶ ಗಣಾರ್ಚಿತೆ |
ದಾಶರಥಿ ಹರಿ ವಾಸುದೇವ ಪದ |
ಸಾಸಿರ ಪತ್ರದಿ ಧೃಢ ಭಕುತಿಯ ಕೊಡು |
ಮೇಷಾಭಿನವ ಪ್ರಾಣೇಶ ವಿಠಲನ|
ದಾಸ್ಯತನವನಿತ್ತು ಪೋಷಿಸುವದೆಮ್ಮಾ||
ಜತೆ
ಅಜನಾಮಭಿನವ ಪ್ರಾಣೇಶ ವಿಠಲನ|
ನಿಜ ದಾಸನೆಂದೆನಿಸು ಸುಜನ ಪೋಷಕಳೆ